ಲಖನೌ(ಉತ್ತಪ್ರದೇಶ):ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರು ಬಿಜೆಪಿಗೆ ಬೆಂಬಲ ನೀಡುತ್ತಾರೆ. ಯೋಗಿ ಆದಿತ್ಯನಾಥ್ ಅವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಶಿಯಾ ಮುಖಂಡ, ಧರ್ಮಗುರು ತುರಾಜ್ ಜೈದಿ ಹೇಳಿಕೆ ನೀಡಿದ್ದಾರೆ.
'ಈಟಿವಿ ಭಾರತ್' ಜೊತೆ ಮಾನತಾಡಿದ ಅವರು, ಎಲ್ಲ ರಾಷ್ಟ್ರೀಯವಾದಿ ಮುಸ್ಲಿಮರು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತಾರೆ. ಸಬ್ ಕಾ ಸಾಥ್, ಸಬ್ ಕಾ ಸಮ್ಮಾನ್, ಮತ್ತು ಸಬ್ ಕಾ ವಿಕಾಸ್ ಘೋಷಣೆಯಂತೆ ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿಸಿದೆ. ಯಾವುದೇ ತಾರತಮ್ಯ ಅಥವಾ ಪೂರ್ವಾಗ್ರಹ ಇಲ್ಲದೇ ಕೆಲಸ ಮಾಡಿದೆ. ಅದರ ಫಲಿತಾಂಶವು ಮಾರ್ಚ್ 10 ರಂದು ಎಲ್ಲರಿಗೂ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೆ ಆರಿಸಿ ಬರಲಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಅಪಾರವಿದೆ. ಅವರು ಮದರಸಾಗಳಲ್ಲಿ ಲ್ಯಾಪ್‌ಟಾಪ್ ಜೊತೆ ಕುರಾನ್ ಕೂಡ ನೀಡಿದ್ದಾರೆ. 370ನೇ ವಿಧಿ ರದ್ದು, ಕೊರೊನಾ ಸಾಂಕ್ರಾಮಿಕದ ವೇಳೆ ಹಿಂದೂಗಳು ಸೇರಿದಂತೆ ಮುಸ್ಲಿಂ ಕುಟುಂಬಗಳಿಗೂ ಯಾವುದೇ ತಾರತಮ್ಯ ಇಲ್ಲದೆ ಪಡಿತರ ವಿತರಿಸಿದ್ದಾರೆ ಎಂದು ತುರಾಜ್ ಜೈದಿ ಹೇಳಿದ್ದಾರೆ.