ವಾರಾಣಸಿ(ಉತ್ತರ ಪ್ರದೇಶ):ಮುಸ್ಲಿಂ ಬಾಂಧವರ ಬಲಿದಾನದ ಹಬ್ಬವಾದ ಬಕ್ರೀದ್ ಹಬ್ಬವನ್ನು ನಾಳೆ ದೇಶದೆಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಹೊಸ ಬಟ್ಟೆ ತೊಟ್ಟು, ಅಲ್ಲಾರಿಗೆ ಪ್ರಾರ್ಥನೆ ಸಲ್ಲಿಸಿ, ಆತ್ಮೀಯರೊಂದಿಗೆ ಹಬ್ಬದೂಟ ಸವಿಯುತ್ತಾರೆ.
ಬಕ್ರೀದ್ ಹಿನ್ನೆಲೆ ವಾರಾಣಸಿ ವಿವಿಧೆಡೆ ಮೇಕೆ ಮಾರುಕಟ್ಟೆಯನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಭೇಲುಪುರದಲ್ಲಿರುವ ಲಲಿತಾ ಚಿತ್ರಮಂದಿರದ ಮೈದಾನದಲ್ಲಿ ಮೇಕೆ ಮಾರುಕಟ್ಟೆ ಸ್ಥಾಪಿಸಲಾಗಿತ್ತು. ಅಲ್ಲಿ ಶೇರಾ ಎಂಬ ಮೇಕೆ ಆಕರ್ಷಣೆಯ ಕೇಂದ್ರವಾಗಿತ್ತು. ಇದು ಬನಾರಸ್‌ನ ಅತ್ಯಂತ ದುಬಾರಿ ಮೇಕೆ ಎಂದು ಹೇಳಲಾಗಿದೆ.
ಈ ಮೇಕೆ ಮಾರುಕಟ್ಟೆಗೆ ಕಾನ್ಪುರ, ಇತಾವ್ಹಾ, ಫತೇಪುರ್, ಅಜಂಗಢ, ಬಿಹಾರ, ರಾಜಸ್ಥಾನ, ಅಮೃತಸರ, ಸಿರೋಹಿ ಸೇರಿದಂತೆ ಮತ್ತಿತರ ಕಡೆಗಳಿಂದ ವ್ಯಾಪಾರಸ್ಥರು ತಮ್ಮ ಮೇಕೆಗಳೊಂದಿಗೆ ಆಗಮಿಸಿದ್ದರು. ಮೇಕೆಗಳ ಬೆಲೆ ಏಳು ಸಾವಿರ ರೂಪಾಯಿಯಿಂದ ಆರಂಭವಾಗಿ ಒಂದೂವರೆ ಲಕ್ಷ ರೂಪಾಯಿವರೆಗೂ ಇದೆ. ಇದರಲ್ಲಿ ಪಂಜಾಬ್ ತಳಿಯ 3 ಮೇಕೆಗಳು ಅತ್ಯಂತ ದುಬಾರಿಯಾಗಿ ಕಂಡು ಬಂದವು. ಶೇರಾ ಮೇಕೆಗೆ ಒಂದೂವರೆ ಲಕ್ಷ ರೂ., ಲಾಲು ಮೇಕೆಗೆ 1 ಲಕ್ಷದ 20 ಸಾವಿರ, ಕಳ್ಳು ಮೇಕೆಗೆ 1 ಲಕ್ಷ ರೂ. ಇದೆ.