ಶ್ರೀನಗರ(ಜಮ್ಮು):ಕಾಶ್ಮೀರದ ಪ್ರಮುಖ ಕಾನೂನು ಕಾಲೇಜಿನ ಪ್ರಾಂಶುಪಾಲ ಶೇಖ್ ಶೌಕತ್ ಹುಸೇನ್ ಅವರನ್ನು ಪ್ರಿನ್ಸಿಪಾಲ ಹುದ್ದೆಯಿಂದ ವಜಾಗೊಳಿಸಲಾಗಿದೆ. ಪಾಕಿಸ್ತಾನದ ಬೆಂಬಲಿತ ಪ್ರತ್ಯೇಕವಾದಿ ಸಂಘಟನೆ ಸಿದ್ಧಾಂತ ಅನುಕರಣೆ ಮಾಡ್ತಿದ್ದ ಕಾರಣ ಅವರನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.
2016ರಲ್ಲಿ ಡಾ. ಶೇಖ್ ಶೌಕತ್ ಅವರು ಸೈಯದ್ ಅಲಿ ಶಾ ಗೀಲಾನಿ, ಅರುಂಧತಿ ರಾಯ್, ಪ್ರೊ.ಎಸ್.ಆರ್.ಗೀಲಾನಿ ಜೊತೆಗೆ ದೆಹಲಿಯಲ್ಲಿ ನಡೆದ ಸಮಾವೇಶವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಭಾರತ ವಿರೋಧಿ ಭಾಷಣ ಮಾಡಿದರು. ಶ್ರೀನಗರದ ಬರ್ಜಲ್ಲಾದ ನಿವಾಸಿಯಾಗಿರುವ ಇವರು, ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಪ್ರಮುಖ ಕಾನೂನು ತಜ್ಞರಾಗಿದ್ದಾರೆ.