ಕರ್ನಾಟಕ

karnataka

ETV Bharat / bharat

ಅಫ್ಘಾನಿಸ್ತಾನ ಪಾಕ್ ಬೆಂಬಲಿತ ಭಯೋತ್ಪಾದನೆಯ ನೆಲೆ, ಭಾರತ ಎಚ್ಚರಿಕೆಯಿಂದ ಇರಬೇಕು: ಶಶಿ ತರೂರ್ - Sashi Taroor

ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶವಾಗಿದ್ದು ಭಾರತ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ, ಭಾರತದ ವೈರಿ ರಾಷ್ಟ್ರ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಗೆ ಅಫ್ಘಾನ್ ನೆಲೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

Congress leader Sashi Taroor
ಕಾಂಗ್ರೆಸ್ ನಾಯಕ ಶಶಿ ತರೂರ್

By

Published : Aug 18, 2021, 8:40 AM IST

ನವದೆಹಲಿ: ಅಫ್ಘಾನಿಸ್ತಾನವು ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಗೆ ನೆಲೆಯಾಗಬಹುದು ಮತ್ತು ತಾಲಿಬಾನ್ ಬಿಕ್ಕಟ್ಟಿನ ಬಗ್ಗೆ ಭಾರತವು ಅತ್ಯಂತ ಜಾಗರೂಕತೆಯಿಂದ ಇರಬೇಕು ಎಂದು ಸಂಸದ ಶಶಿ ತರೂರ್ ಎಚ್ಚರಿಸಿದ್ದಾರೆ.

ನಮ್ಮನ್ನು ಗುರಿಯಾಗಿಸಿಕೊಂಡಿರುವ ಪಾಕ್ ಬೆಂಬಲಿತ ಭಯೋತ್ಪಾದಕರು ಅಫ್ಘಾನಿಸ್ತಾನದಲ್ಲಿ ಒಂದು ದೊಡ್ಡ ನೆಲೆಯನ್ನು ಹೊಂದಿದ್ದಾರೆ. ಅಫ್ಘಾನ್ ನಮ್ಮ ಮೇಲೆ ಬಂದು ದಾಳಿ ಮಾಡುವವರ ಮೂಲವಾಗಿದೆ. ಆದ್ದರಿಂದ ನಾವು ಪರಿಸ್ಥಿತಿಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂಓದಿ: 'ತಾಲಿಬಾನಿ​ಗಳು ಯಾವಾಗ ಮನೆ ಬಾಗಿಲು ಬಡೀತಾರೋ ಎಂಬ ಭಯದಲ್ಲೇ ನಮ್ಮ ಬದುಕು': ಕಾಬೂಲ್ ಮಹಿಳಾಧಿಕಾರಿಯ ವೇದನೆ

ಈ ವ್ಯಕ್ತಿಗಳು (ತಾಲಿಬಾನ್) ಅಧಿಕಾರಕ್ಕೆ ಬಂದಿರುವುದಕ್ಕೆ ಪಾಕಿಸ್ತಾನ ಶೇ. 100 ಸಂತೋಷಪಡಬೇಕೇ ಎಂದು ನನಗೆ ಗೊತ್ತಿಲ್ಲ. ಆದರೆ ಅವರು, ಪಾಕ್​ ಪರವಾಗಿದ್ದಾರೆ. ಆದ್ದರಿಂದ ಪರಿಸ್ಥಿತಿ ನಂಬಲಾಗದಷ್ಟು ಅಪಾಯಕಾರಿಯಾಗಿದೆ ಅನ್ನೋದು ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿಯೂ, ದೇಶದ ವಿದೇಶಾಂಗ ಖಾತೆ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿರುವ ತರೂರ್ ಅವರ ಆತಂಕ.

ABOUT THE AUTHOR

...view details