ನವದೆಹಲಿ:ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕೇರಳದ ಹಿರಿಯ ರಾಜಕಾರಣಿ ಶಶಿ ತರೂರ್ ಬಿಡುಗಡೆ ಮಾಡಿದ ಪ್ರಣಾಳಿಕೆ ವಿವಾದ ಸೃಷ್ಟಿಸಿದೆ. ಇದರಲ್ಲಿ ಚಿತ್ರಿಸಲಾಗಿರುವ ಭಾರತದ ಮ್ಯಾಪ್ನಲ್ಲಿ ದೇಶದ ಮುಕುಟ ಮಣಿಯಾದ ಕಾಶ್ಮೀರವೇ ಮಾಯವಾಗಿದೆ. ಇದು ಭಾರಿ ಟೀಕೆಗೆ ಗುರಿಯಾಗಿದ್ದು, ಕಾಂಗ್ರೆಸ್ ನಾಯಕ ಭೇಷರತ್ ಕ್ಷಮೆ ಕೋರಿದ್ದಾರೆ.
ಬಿಡುಗಡೆಯಾದ ಪ್ರಣಾಳಿಕೆಯಲ್ಲಿ ಕೇಂದ್ರಾಡಳಿತ ಪ್ರದೇಶಗಳಾದ ಕಾಶ್ಮೀರ ಮತ್ತು ಲಡಾಖ್ ಅನ್ನು ಕೈಬಿಡಲಾಗಿದೆ. ಇದು ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ದೇಶದ ಅವಿಭಾಜ್ಯ ಅಂಗವಾದ ಕಾಶ್ಮೀರವನ್ನು ಮ್ಯಾಪ್ನಲ್ಲಿ ಬಿಟ್ಟಿರುವುದನ್ನು ಬಿಜೆಪಿ ಟೀಕಿಸಿದೆ.
ದೇಶಕ್ಕೆ ಅವಮಾನ, ತೋಡೋ ಕಾರ್ಯಸೂಚಿ:ನಕ್ಷೆಯಲ್ಲಿ ಕಾಶ್ಮೀರವನ್ನು ಬಿಟ್ಟಿದ್ದಕ್ಕೆ ಮುಗಿಬಿದ್ದಿರುವ ಬಿಜೆಪಿ, "ಇದು ದೇಶಕ್ಕೆ ಮಾಡಿದ ಅವಮಾನ. ಕಾಂಗ್ರೆಸ್ ವಿಭಜಕ ಕಾರ್ಯಸೂಚಿ ಈ ಮೂಲಕ ಕಾಣುತ್ತದೆ. ಇತ್ತ ರಾಹುಲ್ ಗಾಂಧಿ ಜೋಡೋ ಭಾರತ ನಡೆಸುತ್ತಿದ್ದಾರೆ ಎಂತಹ ವಿಪರ್ಯಾಸ" ಎಂದು ತರಾಟೆಗೆ ತೆಗೆದುಕೊಂಡಿದೆ.