ಕರ್ನಾಟಕ

karnataka

ETV Bharat / bharat

Whale Shark: ಮೀನುಗಾರರ ಬಲೆಯಲ್ಲಿ ಸಿಲುಕಿದ್ದ ವಿಶ್ವದ ಅತಿ ದೊಡ್ಡ ಮೀನಿನ ರಕ್ಷಣೆ - World's Largest whale shark

ಮೀನುಗಾರರ ಬಲೆಯಲ್ಲಿ ಸಿಲುಕಿದ್ದ ಸುಮಾರು ಎರಡು ಟನ್ ತೂಕದ ತಿಮಿಂಗಿಲ ಶಾರ್ಕ್ ಅನ್ನು ಆಂಧ್ರದ ವಿಶಾಖಪಟ್ಟಣಂನಲ್ಲಿ ರಕ್ಷಿಸಿ, ಸಮುದ್ರಕ್ಕೆ ಬಿಡಲಾಗಿದೆ.

whale shark
ತಿಮಿಂಗಿಲ ಶಾರ್ಕ್

By

Published : Dec 23, 2021, 12:52 PM IST

ವಿಶಾಖಪಟ್ಟಣಂ:ಆಂಧ್ರಪ್ರದೇಶದ ವಿಶಾಖಪಟ್ಟಣಂನ ತಾಂತಾಡಿ ಕಡಲತೀರದಲ್ಲಿ ಮೀನುಗಾರರು ತಮ್ಮ ಬಲೆಯಲ್ಲಿ ಸಿಲುಕಿದ್ದ ತಿಮಿಂಗಿಲ ಶಾರ್ಕ್ ಅನ್ನು ರಕ್ಷಿಸಿದ್ದಾರೆ ಎಂದು ಜಿಲ್ಲಾ ಅರಣ್ಯಾಧಿಕಾರಿ (ಡಿಎಫ್‌ಒ) ಅನಂತ ಶಂಕರ್ ತಿಳಿಸಿದ್ದಾರೆ.

ವೇಲ್​ ಶಾರ್ಕ್​ ಅಥವಾ ತಿಮಿಂಗಿಲ ಶಾರ್ಕ್, ಇದು ವಿಶ್ವದ ಅತಿದೊಡ್ಡ ಮೀನಾಗಿದ್ದು, ಇವುಗಳು ಈಗ ಅಳಿವಿನಂಚಿನಲ್ಲಿವೆ. ಇದೇನಾದರು ತಮ್ಮ ಬಲೆಯಲ್ಲಿ ಸಿಕ್ಕಿಬಿದ್ದರೆ ಅದನ್ನು ರಕ್ಷಿಸಲು ಮತ್ತು ಸುರಕ್ಷಿತವಾಗಿ ಸಮುದ್ರಕ್ಕೆ ಬಿಡಲು ಅರಣ್ಯ ಇಲಾಖೆಯನ್ನು ಸಂಪರ್ಕಿಸಲು ಮೀನುಗಾರರಿಗೆ ಸಲಹೆ ನೀಡಲಾಗುತ್ತದೆ. ಈ ವೇಳೆ ಮೀನುಗಾರಿಕೆ ಬಲೆಗಳಿಗೆ ಯಾವುದೇ ಹಾನಿಯಾದಲ್ಲಿ ಪರಿಹಾರವನ್ನು ನೀಡಲಾಗುತ್ತದೆ ಎಂದು ಅನಂತ ಶಂಕರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶಾರ್ಕ್​ ಪ್ರತಿಕಾಯಗಳಲ್ಲಿನ ಪ್ರೋಟೀನ್​​​​ನಿಂದ ಕೊರೊನಾಕ್ಕೆ ತಡೆ: ಸಂಶೋಧನೆ

ಇದೀಗ ಮೀನುಗಾರರ ಬಲೆಯಲ್ಲಿ ಸಿಲುಕಿದ್ದ ಸುಮಾರು ಎರಡು ಟನ್​ (2000 ಕೆಜಿ) ತೂಕದ ತಿಮಿಂಗಿಲ ಶಾರ್ಕ್ ಅನ್ನು ಅರಣ್ಯಾಧಿಕಾರಿಗಳು, ಮೀನುಗಾರರು ಮತ್ತು ವನ್ಯಜೀವಿ ಸಂರಕ್ಷಕರು ಸಮುದ್ರಕ್ಕೆ ಬಿಟ್ಟಿದ್ದಾರೆ.

For All Latest Updates

ABOUT THE AUTHOR

...view details