ಚಂಡೀಗಢ್ :ಹರಿಯಾಣದ ಗೋಹಾನಾದಲ್ಲಿ ಗ್ರಾಮಸ್ಥನೊಬ್ಬನ ಖಾತೆಯಿಂದ ಆನ್‌ಲೈನ್‌ನಲ್ಲಿ ವಂಚನೆ ಮಾಡಿ ಸುಮಾರು 1.45 ಲಕ್ಷ ರೂಪಾಯಿಗೆ ಕನ್ನ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಈತ ತನ್ನ ಒಟಿಪಿಯನ್ನು ಆರೋಪಿಗಳೊಂದಿಗೆ ಹಂಚಿಕೊಂಡಿರುವುದೇ ಹಣ ಕಳೆದುಕೊಳ್ಳಲು ಪ್ರಮುಖ ಕಾರಣ.
ಇಂತಹ ಮೋಸ ಹೊಗುವ ಪ್ರಕರಣವೇನು ಮೊದಲಲ್ಲ. ಈ ಹಿಂದೆ ಸಹಾ ಒಟಿಪಿ(ಒನ್ ಟೈಂ ಪಾಸ್ವರ್ಡ್) ಹಂಚಿಕೊಂಡ ನಂತರದಲ್ಲಿ ಜನರ ಖಾತೆಗಳಿಂದ ಹಣ ಮಾಯವಾದ ಅನೇಕ ಪ್ರಕರಣ ಮುನ್ನೆಲೆಗೆ ಬಂದಿವೆ.
ಒಟಿಪಿ ಶೇರ್ ವಂಚನೆಗೆ ಹೇಗೆ ಕಾರಣವಾಗಬಹುದು?:ಈ ನಿಟ್ಟಿನಲ್ಲಿ ಪ್ರಸಿದ್ಧ ಸೈಬರ್ ತಜ್ಞ ರಾಜೇಶ್ ರಾಣಾ ಅವರು ಈಟಿವಿ ಭಾರತ್ನೊಂದಿಗೆ ಮಾತನಾಡಿ, ವಂಚಕರ ಮೊದಲ ಗುರಿ ವ್ಯಕ್ತಿಯ ಒಟಿಪಿ ಪಡೆಯುವುದು. ಯಾಕೆಂದರೆ, ಒಟಿಪಿ ಪಡೆದ ನಂತರ ಅವರು ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಎಲ್ಲಾ ಹಣ ಹಿಂಪಡೆಯಬಹುದು.
ದುರಾಸೆಗೊಳಗಾಗಿ ಒಟಿಪಿಯನ್ನು ಹಂಚಿಕೊಳ್ಳಬೇಡಿ :ಇದಕ್ಕಾಗಿ ಸೈಬರ್ ಅಪರಾಧಿಗಳು ವಿವಿಧ ರೀತಿಯ ಆಮಿಷಗಳನ್ನು ಒಡ್ಡುತ್ತಾರೆ. ಹಾಗೆ ಜನರಿಗೆ ತಮ್ಮ ಖಾತೆಯಲ್ಲಿ ದೊಡ್ಡ ಮೊತ್ತವನ್ನು ಜಮಾ ಮಾಡಲು ಕೇಳಲಾಗುತ್ತದೆ. ಆ ಬಳಿಕ ತಮ್ಮ ಕ್ರೆಡಿಟ್ ಕಾರ್ಡ್ ಅಥವಾ ಅವರ ಡೆಬಿಟ್ ಕಾರ್ಡ್ ನವೀಕರಿಸುವ ಬಗ್ಗೆ ಮಾತನಾಡುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ತಮ್ಮ ಖಾತೆ ಮತ್ತು ಡೆಬಿಟ್ ಕಾರ್ಡ್‌ನ ನಿರ್ಬಂಧಿಸಲಾಗಿದೆ ಎಂದು ಹೇಳುವ ಮೂಲಕ ಜನರನ್ನು ವಂಚಿಸಿ ತಮ್ಮ ಒಟಿಪಿ ಪಡೆಯುತ್ತಾರೆ.
ಒಟಿಪಿ ಶೇರ್ ಏನನ್ನೂ ಮಾಡಲು ಸಾಧ್ಯವಾಗಲ್ಲ :ಗೋಹಾನಾ ಪ್ರಕರಣದಲ್ಲಿ ಆರೋಪಿ ತನ್ನ ಖಾತೆಗೆ ಹಣ ಹಾಕುವಂತೆ ಕೇಳಿಕೊಂಡಿದ್ದಾನೆ. ವಂಚನೆಗೊಳಗಾದಾತ ತನ್ನ ಒಟಿಪಿಯನ್ನು ಆರೋಪಿಗಳೊಂದಿಗೆ ಹಂಚಿಕೊಂಡಿದ್ದಾನೆ. ತಕ್ಷಣವೇ ಆತನ ಖಾತೆಯಿಂದ ಹಣ ಮಾಯವಾಗಿದೆ.