ಕರ್ನಾಟಕ

karnataka

ETV Bharat / bharat

ಶರದ್ ಪವಾರ್​ಗೆ ಬಂತು 'ಪ್ರೇಮ ಪತ್ರ': 'ಇಡಿ' ಅಂದ್ರೆ ಜೋಕ್ ಎಂದ ಎನ್​ಸಿಪಿ ಮುಖ್ಯಸ್ಥ - ಶರದ್ ಪವಾರ್​ಗೆ ಆದಾಯ ತೆರಿಗೆ ಇಲಾಖೆ ನೋಟಿಸ್

ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಿದ ಒಂದು ದಿನದ ನಂತರ ಶರದ್ ಪವಾರ್ ಅವರಿಗೆ ಆದಾಯ ತೆರಿಗೆ ನೋಟಿಸ್ ನೀಡಿರುವುದು ಗಮನಾರ್ಹ.

harad Pawar gets IT notice
harad Pawar gets IT notice

By

Published : Jul 1, 2022, 2:48 PM IST

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಬಂಡಾಯ ಶಾಸಕ ಏಕನಾಥ್ ಶಿಂಧೆ ಅಧಿಕಾರ ವಹಿಸಿಕೊಂಡ ಮರುದಿನವೇ ಆದಾಯ ತೆರಿಗೆ ಇಲಾಖೆಯಿಂದ ಗುರುವಾರ ತಮಗೆ ‘ಪ್ರೇಮ ಪತ್ರ’ ಬಂದಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಟ್ವೀಟ್ ಮಾಡಿದ್ದಾರೆ.

2004, 2009, 2014 ಮತ್ತು 2020ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಾಗ ಸಲ್ಲಿಸಿರುವ ಎಲ್ಲ ಅಫಿಡವಿಟ್‌ಗಳಲ್ಲಿರುವ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಯು ಪ್ರಸ್ತುತ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪವಾರ್, "ನನಗೆ ಆದಾಯ ತೆರಿಗೆ ಇಲಾಖೆಯಿಂದ ಪ್ರೇಮ ಪತ್ರ ಬಂದಿದೆ." ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ರಾಜೀನಾಮೆಯೊಂದಿಗೆ ಬುಧವಾರ ಪತನಗೊಂಡ ಮಹಾ ವಿಕಾಸ್ ಆಘಾಢಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ರಾಜಕಾರಣಿ ಪವಾರ್ ಗುರುವಾರ ಸಂಜೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳನ್ನು ಗುರಿಯಾಗಿಸಲು ಬಿಜೆಪಿ ಅನುಸರಿಸುತ್ತಿರುವ ವಿಧಾನಗಳ ಬಗ್ಗೆ ಹರಿಹಾಯ್ದರು.

"ಸುಮಾರು ಐದು ವರ್ಷಗಳ ಹಿಂದೆ ನಮಗೆ ಇಡಿ ಬಗ್ಗೆ ತಿಳಿದಿರಲಿಲ್ಲ. ಆದರೆ, ಈಗ ಇಡಿ ದೇಶದ ಗ್ರಾಮೀಣ ಭಾಗಗಳ ಮೂಲೆ ಮೂಲೆಗಳಲ್ಲಿ ತಮಾಷೆಯಾಗಿ ಮಾರ್ಪಟ್ಟಿದೆ" ಎಂದು ಪವಾರ್ ಟ್ವೀಟಿಸಿದ್ದಾರೆ.

ಕಾನೂನುಬದ್ಧವಾಗಿ ನನ್ನ ಬಳಿ ಅಗತ್ಯವಾದ ಎಲ್ಲ ದಾಖಲೆಗಳಿವೆ ಎಂದಿರುವ ಶರದ್ ಪವಾರ್, "ನಾನು ಈ ಏಜೆನ್ಸಿಗಳ ದೃಢತೆಯನ್ನು ಶ್ಲಾಘಿಸುತ್ತೇನೆ, ಇದು ಕಾಲಾನಂತರದಲ್ಲಿ ತೀವ್ರವಾಗಿ ಸುಧಾರಿಸಿದೆ. ಇದು ನಿರ್ದಿಷ್ಟ ಜನರ ಬಗ್ಗೆ ಹಲವಾರು ವರ್ಷಗಳ ಹಿಂದಿನ ಮಾಹಿತಿಯನ್ನು ಸಂಗ್ರಹಿಸುವುದು ನಿಜಕ್ಕೂ ಬಹಳ ದೊಡ್ಡ ಕೆಲಸವಾಗಿದೆ." ಎಂದು ಪವಾರ್ ಇಡಿ ಬಗ್ಗೆ ವ್ಯಂಗ್ಯವಾಗಿ ಹೇಳಿದ್ದಾರೆ.

ABOUT THE AUTHOR

...view details