ಕರ್ನಾಟಕ

karnataka

ETV Bharat / bharat

ದೀದಿ, ಡಿಎಂಕೆ, ಎಲ್​ಡಿಎಫ್​ ಭಾರಿ ಮುನ್ನಡೆ : ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ ಶರದ್ ಪವಾರ್​

ಪಶ್ಚಿಮ ಬಂಗಾಳದಲ್ಲಿ ಮಮತಾ, ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಕೇರಳದಲ್ಲಿ ಎಲ್​ಡಿಎಫ್​ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದ್ದು, ಇದೀಗ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

Sharad pawar
Sharad pawar

By

Published : May 2, 2021, 3:19 PM IST

ಮುಂಬೈ:ಪಂಚರಾಜ್ಯ ಚುನಾವಣೆ ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದ್ದು, ಇಲ್ಲಿಯವರೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​, ಕೇರಳದಲ್ಲಿ ಎಲ್​​ಡಿಎಫ್​ ಮೈತ್ರಿಕೂಟ ಹಾಗೂ ತಮಿಳುನಾಡಿನಲ್ಲಿ ಡಿಎಂಕೆ ಗೆಲುವಿನತ್ತ ದಾಪುಗಾಲು ಹಾಕಿವೆ.

ಈ ಮೂರು ರಾಜ್ಯಗಳಲ್ಲಿ ಮ್ಯಾಜಿಕ್​ ನಂಬರ್​ ಮೀರಿ ಮುನ್ನಡೆ ಪಡೆದುಕೊಳ್ಳುತ್ತಿದ್ದಂತೆ ಎನ್​​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಟ್ವೀಟ್ ಮಾಡಿ ಮೂರು ಪಕ್ಷಗಳ ಮುಖ್ಯಸ್ಥರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ನಿಮ್ಮ ಅದ್ಭುತ ಗೆಲುವಿಗೆ ಅಭಿನಂದನೆಗಳು ಮಮತಾ ಬ್ಯಾನರ್ಜಿ. ಜನರ ಕಲ್ಯಾಣ ಮತ್ತು ಸಾಂಕ್ರಾಮಿಕ ರೋಗ ಒಟ್ಟಾಗಿ ನಿಭಾಯಿಸುವತ್ತ ಕೆಲಸ ಮುಂದುವರಿಸೋಣ ಎಂದು ಟ್ವೀಟ್ ಮಾಡಿದ್ದಾರೆ.

ಅಭಿನಂದನೆಗಳು ಸ್ಟಾಲಿನ್​. ಈ ಗೆಲುವಿಗೆ ನೀವು ನಿಜವಾಗಿಯೂ ಅರ್ಹರು. ನಿಮ್ಮೆ ಮೇಲೆ ನಂಬಿಕೆ ಇಟ್ಟಿರುವ ಜನರ ಸೇವೆ ಸಲ್ಲಿಸಲು ನಿಮಗೆ ಶುಭ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಕೇರಳ ಚುನಾವಣೆಯಲ್ಲಿ ಸತತ ಐತಿಹಾಸಿಕ ಗೆಲುವು ದಾಖಲು ಮಾಡಿದ್ದಕ್ಕಾಗಿ ಅಭಿನಂದನೆಗಳು. ಒಟ್ಟಾಗಿ ಈ ಚುನಾವಣೆಯಲ್ಲಿ ನಾವು ಹೋರಾಡಿದ್ದೇವೆ. ಇದೀಗ ಒಟ್ಟಿಗೆ ಕೋವಿಡ್ ವಿರುದ್ಧ ಹೋರಾಡೋಣ ಎಂದು ಶರದ್​ ಪವಾರ್ ಅವರು ಸಿಎಂ ಪಿಣರಾಯಿ ವಿಜಯನ್​ ಅವರಿಗೆ ಕರೆ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಈಗಾಗಲೇ 206ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ತಮಿಳುನಾಡಿನಲ್ಲಿ ಟಿಎಂಕೆ 142 ಹಾಗೂ ಕೇರಳದಲ್ಲಿ ಎಲ್​ಡಿಎಫ್​ 93ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

ABOUT THE AUTHOR

...view details