ಭೋಪಾಲ್(ಮಧ್ಯಪ್ರದೇಶ):ನದಿಗೆ ಸ್ನಾನ ಮಾಡಲು ತೆರಳಿದ್ದ ಮಕ್ಕಳಿಗೆ ಇಲ್ಲಿನ ಪೊಲೀಸರು ವಿಚಿತ್ರ ಶಿಕ್ಷೆ ನೀಡಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗಿದೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಈ ಘಟನೆ ನಡೆದಿದೆ.
10 ಮಕ್ಕಳು ಸ್ನಾನ ಮಾಡುವ ಉದ್ದೇಶದಿಂದ ನದಿಗೆ ತೆರಳಿವೆ. ಇದರ ಬಗ್ಗೆ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಮಕ್ಕಳನ್ನ ವಿಚಿತ್ರ ಶಿಕ್ಷೆಗೊಳಪಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ತಾಲೀಮು ತೆಗೆಸಿರುವ ಪೊಲೀಸರು ತದನಂತರ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ಮಾಡಿಸಿದ್ದಾರೆ. ಸದ್ಯ ಇದರ ವಿಡಿಯೋ ವೈರಲ್ ಆಗಿದೆ.