ಹರಿದ್ವಾರ: ಪವಿತ್ರ ಸ್ನಾನಕ್ಕಾಗಿ ಹರಿದ್ವಾರ ತಲುಪುವ ಭಕ್ತರಿಗಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆಗಳು ಕುಸಿದು ಬಿದ್ದಿವೆ.
ಮಹಾ ಕುಂಭಮೇಳದ ತಾತ್ಕಾಲಿಕ ಸೇತುವೆ ಅಲುಗಾಟದಿಂದ ಭಕ್ತರಿಗೆ ಆತಂಕ - ಹರಿದ್ವಾರದ ಖಡ್ಕಿಯ ಸ್ಮಶಾನ ಮೈದಾನದಲ್ಲಿ ತಾತ್ಕಾಲಿಕ ಸೇತುವೆ
ಕುಂಭ ಮೇಳದ ಮ್ಯಾಜಿಸ್ಟ್ರೇಟ್ ದೀಪಕ್ ರಾವತ್ ಅವರು ಈ ಸಂಬಂಧ ಪಿಡಬ್ಲ್ಯುಡಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದಾರೆ..
ಮಹಾ ಕುಂಭಮೇಳದ ಭಕ್ತರು ಆತಂಕದಲ್ಲಿ
ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಕುಂಭ ಮೇಳ ನಡೆಯುತ್ತೆ. ಈ ವರ್ಷದ ಏಪ್ರಿಲ್ 27ರಂದು ಚೈತ್ರ ಪೂರ್ಣಿಮೆಯಂದು ಈ ಮಹಾ ಕುಂಭಮೇಳ ಮುಕ್ತಾಯಗೊಳ್ಳಲಿದೆ. ಹರಿದ್ವಾರದ ಖಡ್ಕಿಯ ಸ್ಮಶಾನ ಮೈದಾನದಲ್ಲಿ ತಾತ್ಕಾಲಿಕ ಸೇತುವೆ ಕುಸಿದಿದ್ದು, ಭಕ್ತರ ಬಳಕೆಗೆ ಯೋಗ್ಯವಲ್ಲದಂತಾಗಿದೆ.
ಸೇತುವೆ ಕುಸಿದ ಹಿನ್ನೆಲೆ ಸ್ಥಳೀಯ ಜನರು ಮತ್ತು ಪ್ರವಾಸಿಗರು ನಿರ್ಮಾಣದ ಗುಣಮಟ್ಟದ ಬಗ್ಗೆ ರಾಜ್ಯ ಲೋಕೋಪಯೋಗಿ ಇಲಾಖೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಕುಂಭ ಮೇಳದ ಮ್ಯಾಜಿಸ್ಟ್ರೇಟ್ ದೀಪಕ್ ರಾವತ್ ಅವರು ಈ ಸಂಬಂಧ ಪಿಡಬ್ಲ್ಯುಡಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದಾರೆ.