ಕೋಲ್ಕತ್ತಾ (ಪಶ್ಚಿಮ ಬಂಗಾಳ):ಚುನಾವಣೆಯಲ್ಲಿ ನೀಡಿದ್ದ ಸುಳ್ಳು ಭರವಸೆಗಳನ್ನು ಮರೆಮಾಚಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ವಿಷಯವನ್ನು ಮುನ್ನೆಲೆಗೆ ತರುತ್ತಿದ್ಧಾರೆ. ಚುನಾವಣೆಯಲ್ಲಿ ಯಾರ ಮತಗಳನ್ನು ಪಡೆದು ಗೆದ್ದಿದ್ದರೋ ಅವರದ್ದೇ ಪೌರತ್ವವನ್ನು ಅಮಿತ್ ಶಾ ಪ್ರಶ್ನಿಸಬಹುದೇ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಟೀಕಿಸಿದ್ದಾರೆ.
ಪ್ರಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಗುರುವಾರ ಮಾತನಾಡಿದ್ದ ಅಮಿತ್ ಶಾ ಕೋವಿಡ್ ಹಾವಳಿ ಮುಗಿದ ಬಳಿಕ ಸಿಎಎ ಅನುಷ್ಠಾನ ಮಾಡುವುದು ಖಚಿತ ಎಂದಿದ್ದರು. ಇದಕ್ಕೆ ತಿರುಗೇಟು ನೀಡಿರುವ ಚಕ್ರವರ್ತಿ, ಪೌರತ್ವ ವಿಚಾರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಪಾತ್ರವೂ ಇದೆ ಎಂದು ದೂರಿದ್ದಾರೆ. 2013ರವರೆಗೆ ಪೌರತ್ವ ಕಾನೂನಿನಲ್ಲಿ 'ಅಕ್ರಮ ವಲಸಿಗರು' ಅಥವಾ 'ಎನ್ಆರ್ಸಿ' ಎಂಬ ಪದವೇ ಇರಲಿಲ್ಲ. ಮಮತಾ ಬ್ಯಾನರ್ಜಿ ಸಚಿವರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ತಿದ್ದುಪಡಿಯ ಮೂಲಕ ಪೌರತ್ವ ಕಾನೂನಿನಲ್ಲಿ ಈ ಪದಗಳನ್ನು ಸೇರಿಸಿದೆ ಎಂದಿದೆ ಎಂದು ಕಿಡಿಕಾರಿದರು.