ನವದೆಹಲಿ:2020ರಲ್ಲಿ ಪ್ರವಾಹ, ಚಂಡಮಾರುತ ಸೇರಿದಂತೆ ನೈಸರ್ಗಿಕ ವಿಕೋಪಗಳು ಮತ್ತು ಮಿಡತೆ ದಾಳಿಯಿಂದ ಹಾನಿಗೊಳಗಾದ ಐದು ರಾಜ್ಯಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಸುಮಾರು 3,113 ಕೋಟಿ ರೂ. ನೆರವು ನೀಡಲು ಅನುಮೋದಿಸಿದೆ.
ಆಂಧ್ರಪ್ರದೇಶ, ಬಿಹಾರ, ತಮಿಳುನಾಡು, ಪುದುಚೇರಿ ಮತ್ತು ಮಧ್ಯಪ್ರದೇಶ - ಇವು ರಾಷ್ಟ್ರೀಯ ವಿಪತ್ತು ಅಪಾಯ ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಂಎಫ್) ಹೆಚ್ಚುವರಿ ನೆರವು ಪಡೆಯುವ ರಾಜ್ಯಗಳಾಗಿವೆ ಎಂದು ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕೃತ್ಯದ ದೃಶ್ಯ ಮರುಸೃಷ್ಟಿಸಲು ದೀಪ್ ಸಿಧು, ಇಕ್ಬಾಲ್ ಸಿಂಗ್ರನ್ನ ಕೆಂಪು ಕೋಟೆಗೆ ಕರೆದೊಯ್ದ ಕ್ರೈಂ ಬ್ರ್ಯಾಂಚ್
ಆಂಧ್ರಪ್ರದೇಶಕ್ಕೆ 280.78 ಕೋಟಿ ರೂ., ಬಿಹಾರಕ್ಕೆ 1,255. ಕೋಟಿ ರೂ., ಮಧ್ಯಪ್ರದೇಶಕ್ಕೆ 1,280 ಕೋಟಿ ರೂ., ತಮಿಳುನಾಡಿಗೆ 286 ಕೋಟಿ ರೂ. ಹಾಗೂ ಪುದುಚೇರಿ 9.91 ಕೋಟಿ ರೂ. ಅನುದಾನವನ್ನು ಕೇಂದ್ರದಿಂದ ನೀಡಲಾಗುವುದು.
2020-21ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು 28 ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಅಪಾಯ ನಿರ್ವಹಣಾ ನಿಧಿಯಿಂದ 4,409 ಕೋಟಿ ರೂ. ಹಾಗೂ ರಾಜ್ಯ ವಿಪತ್ತು ಅಪಾಯ ನಿರ್ವಹಣಾ ನಿಧಿಯಿಂದ 19,036 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.