ನವದೆಹಲಿ:ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳನ್ನು ಗಲ್ಲಿಗೇರಿಸಲಾಗುತ್ತಿದ್ದು, ಉತ್ತರಪ್ರದೇಶ ಅಮರೋಹಿ ಜಿಲ್ಲೆಯ ಶಬ್ನಮ್ ಮರಣ ದಂಡನೆಗೆ ಗುರಿಯಾಗಿರುವ ಆರೋಪಿಯಾಗಿದ್ದಾರೆ.
ಅಮರೋಹಿ ಜಿಲ್ಲೆಯ ಬಾಬನ್ಕೊಡಿ ಗ್ರಾಮದಲ್ಲಿ 2018ರ ಏಪ್ರಿಲ್ 14-15ರ ರಾತ್ರಿ ತನ್ನ ಲವರ್ ಸಲೀಂನೊಂದಿಗೆ ಸೇರಿ ಶಬ್ನಮ್ ತನ್ನ ಕುಟುಂಬದ ಏಳು ಸದಸ್ಯರ ಹತ್ಯೆ ಮಾಡಿದ್ದಳು. ಕೃತ್ಯದಲ್ಲಿ ಭಾಗಿಯಾಗಿದ್ದ ಮಹಿಳೆ ಹಾಗೂ ಆಕೆಯ ಲವರ್ ಸಲೀಂಗೆ ಮರಣದಂಡನೆ ವಿಧಿಸಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿತ್ತು. ಇದಕ್ಕೆ ರಾಷ್ಟ್ರಪತಿ ಅಂಕಿತ ಕೂಡ ಹಾಕಿದ್ದರು. ಇದನ್ನ ಪ್ರಶ್ನೆ ಮಾಡಿ ಕ್ಯುರೇಟಿವ್ ಅರ್ಜಿ ಸಲ್ಲಿಕೆ ಮಾಡಿದ್ದರಿಂದ ಪ್ರಕರಣವನ್ನ ಮತ್ತೊಮ್ಮೆ ವಿಚಾರಣೆ ನಡೆಸಲಾಗಿತ್ತು. ಆದರೆ ಅದು ವಜಾಗೊಂಡಿತ್ತು.