ಕೊಚ್ಚಿ(ಕೇರಳ):ಇಬ್ಬರು ಸಿದ್ಧ ವಯಸ್ಕರ ನಡುವಿನ ಲೈಂಗಿಕ ಸಂಬಂಧವನ್ನ ಸೆಕ್ಷನ್ 376ರ ಅಡಿ ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ಆದೇಶ ಹೊರಹಾಕಿದೆ. ಇತ್ತಿಚೀನ ದಿನಗಳಲ್ಲಿ ಯುವ ವಯಸ್ಕರರಲ್ಲಿ ಇಷ್ಟದ ಲೈಂಗಿಕ ಸಂಬಂಧ ನಡೆಯುತ್ತಿವೆ ಎಂದು ಅಭಿಪ್ರಾಯಪಟ್ಟಿದೆ.
ದಂಪತಿಗಳು ತಮ್ಮ ನಡುವಿನ ಸಂಬಂಧ ಮುರಿದುಕೊಂಡ ಬಳಿಕ ಹೆಚ್ಚಿನ ಸಂಖ್ಯೆಯ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದಿರುವ ಕೇರಳ ಹೈಕೋರ್ಟ್, ಮದುವೆಯಾಗುವುದಾಗಿ ಸುಳ್ಳು ಭರವಸೆ ಮೇಲೆ ಬಲವಂತವಾಗಿ ಲೈಂಗಿಕ ಸಂಬಂಧ ಬೆಳೆಸುತ್ತಿದ್ದು, ಅಂತಹ ಪ್ರಕರಣಗಳಲ್ಲಿ ಈ ಆದೇಶ ಸಂಬಂಧ ಪಡುವುದಿಲ್ಲ ಎಂದೂ ನ್ಯಾಯಮೂರ್ತಿ ಬೆಚ್ಚು ಕುರಿಯನ್ ಥಾಮಸ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಏನಿದು ಪ್ರಕರಣ?:ನಾಥ್ ಎಂಬ ವಕೀಲ ತಮ್ಮ ಸಹೋದ್ಯೋಗಿ ಜೊತೆ ನಾಲ್ಕು ವರ್ಷಗಳಿಂದ ಒಮ್ಮತದ ಸಂಬಂಧ ಹೊಂದಿದ್ದರು. ಆದರೆ, ಬೇರೆ ಮಹಿಳೆ ಜೊತೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ನಾಥ್ ಮದುವೆಯಾಗಲು ನಿರ್ಧರಿಸಿದ್ದ ಯುವತಿಯನ್ನ ಹೋಟೆಲ್ನಲ್ಲಿ ಭೇಟಿಯಾಗಿದ್ದರು. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ಸಹ ಯತ್ನಿಸಿದ್ದಳು.