ಕರ್ನಾಟಕ

karnataka

ETV Bharat / bharat

ಕಾಗುಣಿತ ಬೋಧನೆಯ ನೆಪ: ಶಾಲೆಗೆ ಕರೆದು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ

ಕಾಗುಣಿತ ಹೇಳುವುದಾಗಿ ಶಾಲೆಗೆ ಕರೆಯಿಸಿಕೊಂಡು ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ.

sexual harassment
sexual harassment

By

Published : Oct 5, 2021, 6:42 PM IST

ರಾಜ್​​ಕೋಟ್​​(ಗುಜರಾತ್​) : ವಿದ್ಯಾರ್ಥಿನಿಯರಿಬ್ಬರಿಗೆ ಕಾಗುಣಿತ ಬೋಧನೆಯ ನೆಪದಲ್ಲಿ ಶಾಲೆಗೆ ಕರೆದು ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಕೇಳಿ ಬಂದಿದ್ದು, ಗುಜರಾತ್​​ನ ರಾಜ್​​ಕೋಟ್​​ನ ಶಾಲೆಯಲ್ಲಿ ಈ ಘಟನೆ ನಡೆದಿದೆ. ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾರೆ.

ಖಾಸಗಿ ಶಾಲೆಯ ಆಡಳಿತಾಧಿಕಾರಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಇಬ್ಬರು ವಿದ್ಯಾರ್ಥಿನಿಯರಿಗೆ ಕಾಗುಣಿತದ ಬೋಧನೆಯ ನೆಪದಲ್ಲಿ ಶಾಲೆಗೆ ಕರೆದು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವರದಿಯಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಅಕ್ಟೋಬರ್​​​ 1ರಂದು ಇಬ್ಬರು ವಿದ್ಯಾರ್ಥಿನಿಯರಿಗೆ ತಮ್ಮ ಕಚೇರಿಗೆ ಕರೆಯಿಸಿಕೊಂಡಿದ್ದಾರೆ. ಈ ವೇಳೆ, ಲೈಂಗಿಕ ಕಿರುಕುಳ ನೀಡಿದ್ದು, ಇದರ ಬಗ್ಗೆ ಹೆತ್ತವರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿರಿ:IPL, ಟಿ-20 ವಿಶ್ವಕಪ್​ನಿಂದ ಹೊರಬಿದ್ದ ಇಂಗ್ಲೆಂಡ್​ ಆಲ್​ರೌಂಡರ್​ ಸ್ಯಾಮ್ ಕರ್ರನ್

ಲೈಂಗಿಕ ಕಿರುಕುಳಕ್ಕೊಳಗಾದ ಇಬ್ಬರು ವಿದ್ಯಾರ್ಥಿನಿಯರು 14 ವರ್ಷದವರು ಎನ್ನಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಕೂಡ ಶಾಲೆಯಲ್ಲಿ ಇಂತಹ ಪ್ರಕರಣ ನಡೆದಿರುವುದಾಗಿ ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಅವರು ತಲೆಮರೆಸಿಕೊಂಡಿದ್ದಾರೆ. ವಿದ್ಯಾರ್ಥಿನಿಯರಿಗೆ ಬೇರೆ ಬೇರೆ ಕಾರಣ ನೀಡಿ, ತನ್ನ ಕೊಠಡಿಗೆ ಕರೆಯಿಸಿಕೊಂಡು ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details