ಕರ್ನಾಟಕ

karnataka

ETV Bharat / bharat

ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಟ್ರೈನಿ IASನಿಂದ ಯುವತಿಗೆ ಲೈಂಗಿಕ ದೌರ್ಜನ್ಯ!? - Madan Lal Banoth

ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿ, ನನ್ನನ್ನ ದೈಹಿಕವಾಗಿ ಬಳಕೆ ಮಾಡಿಕೊಂಡಿದ್ದಾಗಿ ಯುವತಿಯೊಬ್ಬಳು ಟ್ರೈನಿ IAS ಅಧಿಕಾರಿ ವಿರುದ್ಧ ದೂರು ದಾಖಲು ಮಾಡಿದ್ದಾಳೆ.

TRAINEE IAS Mrugenderlal
TRAINEE IAS Mrugenderlal

By

Published : Oct 21, 2021, 9:11 PM IST

ಹೈದರಾಬಾದ್​:ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಲೈಂಗಿಕ ದೌಜನ್ಯವೆಸಗಿದ್ದಾಗಿ ಟ್ರೈನಿ ಐಎಎಸ್​ ಅಧಿಕಾರಿ ಮೇಲೆ ಯುವತಿಯೊಬ್ಬಳು ದೂರು ದಾಖಲು ಮಾಡಿದ್ದಾಳೆ. ಹೈದರಾಬಾದ್​​ನ ಕುಕಟ್​ಪಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಟಿಆರ್​ಎಸ್​ ಮಾಜಿ ಶಾಸಕ ಮದನ್​ಲಾಲ್​ ಮಗನಾಗಿರುವ ಮುರುಗೇಂದ್ರ ಲಾಲ್​ ಈ ಕೃತ್ಯವೆಸಗಿದ್ದಾನೆಂದು ಹೇಳಲಾಗಿದ್ದು, ಕಳೆದ ತಿಂಗಳು 29ರಂದು ದೂರು ದಾಖಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತಂದೆ ಮದನ್​ಲಾಲ್ ಜೊತೆ ಮುರುಗೇಂದ್ರ

ಮುರುಗೇಂದ್ರ ಲಾಲ್​ ಸದ್ಯ ತಮಿಳುನಾಡಿನ ಮಧುರೈನಲ್ಲಿ ಟ್ರೈನಿ ಐಎಎಸ್​ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಫೇಸ್​ಬುಕ್​ ಮೂಲಕ ಯುವತಿ ಸಂಪರ್ಕ ಮಾಡಿದ್ದಾಗಿ ತಿಳಿದು ಬಂದಿದೆ. 2019ರ ಸೆಪ್ಟೆಂಬರ್​​ನಲ್ಲಿ ಹೈದರಾಬಾದ್​ನಲ್ಲಿ ಮುರುಗೇಂದ್ರ ಲಾಲ್​​ ಸ್ನೇಹಿತನ ಹುಟ್ಟುಹಬ್ಬದಲ್ಲೂ ಯುವತಿ ಭಾಗಿಯಾಗಿದ್ದಾಗಿ ಹೇಳಿಕೊಂಡಿದ್ದಾಳೆ.

ಇದೇ ವರ್ಷ ಡಿಸೆಂಬರ್​ ತಿಂಗಳಲ್ಲಿ ಮುರುಗೇಂದ್ರ ತನಗೆ ರಾಷ್ಟ್ರೀಯ ಪೊಲೀಸ್ ಅಕಾಡೆಮಿಗೆ ಕರೆದುಕೊಂಡು ಹೋಗಿ ದೈಹಿಕವಾಗಿ ಬಳಸಿಕೊಂಡಿದ್ದಾಗಿ ಹೇಳಿದ್ದು, ಈ ವೇಳೆ ಮದುವೆ ಮಾಡಿಕೊಳ್ಳುವ ಭರವಸೆ ಸಹ ನೀಡಿದ್ದಾಗಿ ತಿಳಿಸಿದ್ದಾಳೆ.

ದೂರು ದಾಖಲು ಮಾಡಿದ ಯುವತಿ

ಇದನ್ನೂ ಓದಿರಿ:ಮಗಳ ಕೊಂದ ಹೆತ್ತಮ್ಮ, ಆಕ್ರೋಶದಲ್ಲಿ ತಾಯಿ ಕೊಲೆ ಮಾಡಿದ ಮಗ! ಕಾರಣ?

2019ರಲ್ಲಿ ಐಎಎಸ್​​ ಆಗಿ ಆಯ್ಕೆಯಾಗಿರುವ ಮುರುಗೇಂದ್ರ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾಗಿ ಆರೋಪ ಮಾಡಿದ್ದಾಳೆ. ಇದಾದ ಬಳಿಕ ಮದುವೆ ಮಾಡಿಕೊಳ್ಳಲು ನಿರಾಕರಣೆ ಮಾಡಿದ್ದು, ಜೀವ ಬೆದರಿಕೆ ಸಹ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಪ್ರಕರಣ ಹಿಂಪಡೆದುಕೊಳ್ಳಲು 25 ಲಕ್ಷ ರೂ. ಹಣ ನೀಡುವುದಾಗಿ ಬೇಡಿಕೆ ಸಹ ಇಟ್ಟಿದ್ದರು ಎಂದು ಯುವತಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾಳೆ.

ABOUT THE AUTHOR

...view details