ಕರ್ನಾಟಕ

karnataka

ETV Bharat / bharat

ವೇಶ್ಯಾವಾಟಿಕೆಯ ಅಡ್ಡೆಯಾಯ್ತು ಮಾಜಿ ಪೊಲೀಸ್ ಅಧಿಕಾರಿಯ ಬಂಗಲೆ: ಗ್ರಾಹಕರಿಗೆ 'ಫುಲ್​ ಮಜಾ ಪ್ಯಾಕೇಜ್​' - sex racket going on in former police officers house in indore

ಮಧ್ಯ ಪ್ರದೇಶದ ಇಂದೋರ್​​ನಲ್ಲಿ ನಿವೃತ್ತ ಪೊಲೀಸ್​ ಅಧಿಕಾರಿಯೊಬ್ಬರ ಬಂಗಲೆಯಲ್ಲಿ ಮಾಂಸ ದಂಧೆಯ ತಾಣವಾಗಿ ಮಾರ್ಪಟ್ಟಿತ್ತು. ಸುದ್ದಿ ತಿಳಿದ ಕೂಡಲೇ ಓರ್ವ ಪೊಲೀಸ್​​ ಗ್ರಾಹಕನ ವೇಷದಲ್ಲಿ ಬಂಗಲೆಗೆ ಹೋಗಿದ್ದರು. ಡೀಲ್​ ಫೈನಲ್​ ಆದ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ದಾಳಿ ನಡೆಸಿ ಓರ್ವ ಮಹಿಳೆ ಸೇರಿ ನಾಲ್ವರನ್ನು ಬಂಧಿಸಿದರು.

sex racket going on in former police officers house in indore
ವೇಶ್ಯಾವಾಟಿಕೆಯ ಅಡ್ಡೆಯಾಗಿದ್ದ ಮಾಜಿ ಪೊಲೀಸ್ ಅಧಿಕಾರಿಯ ಬಂಗಲೆ

By

Published : Apr 5, 2021, 4:55 PM IST

Updated : Apr 5, 2021, 7:24 PM IST

ಇಂದೋರ್: ನಿವೃತ್ತ ಪೊಲೀಸ್ ಅಧಿಕಾರಿಯ ಬಂಗಲೆಯಲ್ಲಿ ಮಾಂಸ ದಂಧೆ ನಡೆಸಲಾಗುತ್ತಿದೆ ಎಂಬುದಾಗಿ ಸ್ಥಳೀಯರು ನೀಡಿದ್ದ ಖಚಿತ ಮಾಹಿತಿ ಮೇರೆಗೆ ವಿಜಯ್ ನಗರ ಪೊಲೀಸರು ಗ್ರಾಹಕನ ವೇಷದಲ್ಲಿ ತೆರಳಿದ್ದು, ಈ ವೇಳೆ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ದಾಳಿ ನಡೆಸಿ ಮಹಿಳೆ ಸೇರಿ ನಾಲ್ಕು ಜನರನ್ನು ಬಂಧಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಗ್ರಾಹಕರಿಗೆ ಬಲೆ :ಮಾಂಸ ದಂಧೆ ನಡೆಸುತ್ತಿದ್ದ ಸ್ಥಳದಲ್ಲಿ ಅನೇಕ ಉನ್ನತ ವ್ಯಕ್ತಿಗಳ ಬಂಗಲೆಗಳಿವೆ. ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಗ್ರಾಹಕರನ್ನು ಸಂಪರ್ಕಿಸುತ್ತಿದ್ದರು.

ಗ್ರಾಹಕರಿಗೆ ಸೋಷಿಯಲ್​ ಮೀಡಿಯಾದಲ್ಲಿಯೇ ಸಂಪೂರ್ಣ ಮಾಹಿತಿ ನೀಡಲಾಗುತ್ತಿತ್ತು. ವಾಟ್ಸ್‌ಆ್ಯಪ್ ಮತ್ತು ಇತರ ಕರೆಗಳು, ಸಾಮಾಜಿಕ ಮಾಧ್ಯಮಗಳ ಮೂಲಕ ಫೋಟೊಗಳನ್ನು ಕಳುಹಿಸುವುದರ ಮೂಲಕ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿದ್ದರು.

ನಿವೃತ್ತ ಪೊಲೀಸ್ ಅಧಿಕಾರಿಯ ಬಂಗಲೆಯಲ್ಲಿ ಯುವತಿಯೊಂದಿಗೆ ರಾತ್ರಿಯಿಡೀ ನೃತ್ಯ ಮತ್ತು ಮದ್ಯಪಾನಕ್ಕೆ ವ್ಯವಸ್ಥೆ ಮಾಡಲಾಗುತ್ತಿತ್ತು. ಅಲ್ಲಿಗೆ ಬರುವ ಗ್ರಾಹಕರಿಗೆ ಪ್ಯಾಕೇಜ್‌ ಸಹ ಇವರು ನೀಡುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ:ಕಿಡ್ನ್ಯಾಪ್ ಕೇಸ್ ಸಂಬಂಧ ಹೇಳಿಕೆ ನೀಡಲು ಕೋರ್ಟ್​ಗೆ ಬಂದ ಸಿಡಿ ಲೇಡಿ.. ಕೆಲವೇ ಕ್ಷಣದಲ್ಲಿ ಹೇಳಿಕೆ ದಾಖಲು

ಪೊಲೀಸರು ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಒಬ್ಬರು ವಕೀಲರಾಗಿದ್ದಾರೆ. ಅವರು ರಾಕೆಟ್ ಆಪರೇಟರ್‌ನ ಪರಿಚಯಸ್ಥರಾಗಿದ್ದಾರೆ. ಅವರು ಸಹ ಈ ಸ್ಥಳಕ್ಕೆ ಬರುತ್ತಿದ್ದರು ಎಂದು ಹೇಳಲಾಗಿದೆ.

ನಿವೃತ್ತ ಪೊಲೀಸ್ ಅಧಿಕಾರಿ ಬಂಗಲೆ ಬಾಡಿಗೆ ಪಡೆದ ಆರೋಪಿಗಳು :ನಿವೃತ್ತ ಪೊಲೀಸ್ ಅಧಿಕಾರಿಯಿಂದ ಬಂಗಲೆಯನ್ನು ಬಾಡಿಗೆಗೆ ಪಡೆಯಲಾಗಿತ್ತು. ಈ ಇಡೀ ಪ್ರಕರಣದ ತನಿಖೆ ವೇಳೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಂದ ಆರೋಪಿಗಳು ಈ ಬಂಗಲೆಯನ್ನು ಬಾಡಿಗೆಗೆ ಪಡೆದಿರುವುದು ತಿಳಿದು ಬಂದಿದೆ.

Last Updated : Apr 5, 2021, 7:24 PM IST

For All Latest Updates

TAGGED:

ABOUT THE AUTHOR

...view details