ಕೋಟಾ(ರಾಜಸ್ಥಾನ) :ಕೋಟಾದ ವಿಜ್ಞಾನನಗರ ಪ್ರದೇಶದಲ್ಲಿರುವ ರೆಡ್ ಸ್ಪೆನ್ಸರ್ ಹೋಟೆಲ್‌ನಲ್ಲಿ ನಡೆಸುತ್ತಿದ್ದ ಸೆಕ್ಸ್ ದಂಧೆಯನ್ನು ರಾಜಸ್ಥಾನ ಪೊಲೀಸರು ಬಯಲು ಮಾಡಿದ್ದಾರೆ.
ಇದರಲ್ಲಿ ಭಾಗಿಯಾಗಿದ್ದ ಪಶ್ಚಿಮ ಬಂಗಾಳದ ಇಬ್ಬರು ಯುವತಿಯರು ಮತ್ತು ಜಾರ್ಖಂಡ್‌ನ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಹೋಟೆಲ್ ಮಾಲೀಕರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೂವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.