ಭಿಂಡ್(ಮಧ್ಯಪ್ರದೇಶ):ವೇಶ್ಯಾವಾಟಿಕೆ ನಡೆಯುತ್ತಿದ್ದ ನಗರದ ಹೋಟೆಲ್ವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು 7 ಮಂದಿ ಪುರುಷರು ಹಾಗೂ ದಂಧೆಗೆ ಬಳಸಿಕೊಳ್ಳುತ್ತಿದ್ದ ಐವರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು ಏಳು ಮಂದಿ ಪುರುಷರು ಮತ್ತು ಐವರು ಯುವತಿಯರನ್ನು ಹೋಟೆಲ್‌ನಿಂದ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಹೋಟೆಲ್‌ನ 2 ನೌಕರರನ್ನು ವಶಕ್ಕೆ ಪಡೆದು ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಮಹಿಳಾ ವಿಭಾಗದ ಉಸ್ತುವಾರಿ ಡಿಎಸ್ಪಿ ಪೂನಂ ಥಾಪಾ ಮಾಹಿತಿ ನೀಡಿದ್ದಾರೆ.