ನವದೆಹಲಿ:ಪಶ್ಚಿಮ ದೆಹಲಿಯ ಪಾಂಡವನಗರದ ವಸತಿಗೃಹವೊಂದರಲ್ಲಿ ನಡೆಯುತ್ತಿದ್ದ ಸೆಕ್ಸ್ ರಾಟೆಕ್ ದಂಧೆಯನ್ನು ಇಂದು ದೆಹಲಿ ಪೊಲೀಸರು ಭೇದಿಸಿದ್ದು, ಮೂವರು ಮಹಿಳೆಯರು ಹಾಗೂ ಒಬ್ಬ ಪಿಂಪ್ ಒಬ್ಬರನ್ನು ಬಂಧಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡಿದ್ದು, ಸುಳಿವೊಂದನ್ನು ಆಧರಿಸಿ ಮಾಂಡವಾಲಿ ಪೊಲೀಸ್ ಠಾಣೆಯ ಎಸ್‌ಐ ಭಾರತೀಯ ರಾಣಿ, ಹೆಡ್ ಕಾನ್ಸ್ಟೇಬಲ್ ಯೋಗೇಶ್ ಮತ್ತು ಕಾನ್ಸ್ಟೇಬಲ್ ಪ್ರಿಯಾಂಕಾ ನೇತೃತ್ವದ ಪೊಲೀಸರ ತಂಡವು ದಾಳಿ ನಡೆಸಿದ ಸಂದರ್ಭದಲ್ಲಿ ಮೂವರು ಮಹಿಳೆಯರು ಮತ್ತು ದಲ್ಲಾಳಿಯನ್ನು ಬಂಧಿಸಲಾಗಿದೆ.
ಸೆಕ್ಸ್ ರಾಕೆಟ್ ಭೇದಿಸಿದ ದೆಹಲಿ ಪೊಲೀಸರು: ಮೂರು ಮಹಿಳೆಯರು, ಒಬ್ಬ ಪಿಂಪ್ ಬಂಧನ - ಪಾಂಡವನಗರ ವಸತಿಗೃಹದಲ್ಲಿ ವೇಶ್ಯಾವಾಟಿಕೆ ದಂಧೆ
ಪಶ್ಚಿಮ ದೆಹಲಿಯ ಪಾಂಡವನಗರದ ವಸತಿ ಗೃಹವೊಂದರಲ್ಲಿ ನಡೆಯುತ್ತಿದ್ದ ಸೆಕ್ಸ್ ರಾಟೆಕ್ ದಂಧೆಯನ್ನು ಇಂದು ದೆಹಲಿ ಪೊಲೀಸರು ಭೇದಿಸಿದ್ದು, ಮೂವರು ಮಹಿಳೆಯರು ಹಾಗೂ ಒಬ್ಬ ಪಿಂಪ್ ಅನ್ನು ಬಂಧಿಸಿದ್ದಾರೆ. ಈ ನಾಲ್ವರು ಪಾಂಡವನಗರ ಸ್ಥಳೀಯ ನಿವಾಸಿಗಳಾಗಿದ್ದು, ಪಿಂಪ್ ಅನ್ನು ನೌಶದ್ ಎಂದು ಗುರುತಿಸಲಾಗಿದೆ. ದಾಳಿ ವೇಳೆ, ಸ್ಥಳದಿಂದ ಅನೇಕ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ನಾಲ್ವರು ಪಾಂಡವನಗರ ಸ್ಥಳೀಯ ನಿವಾಸಿಗಳಾಗಿದ್ದು, ಪಿಂಪ್ ಅನ್ನು ನೌಶದ್ ಎಂದು ಗುರುತಿಸಲಾಗಿದೆ. ದಾಳಿ ವೇಳೆ, ಸ್ಥಳದಿಂದ ಅನೇಕ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಪೊಲೀಸರ ಪ್ರಕಾರ, ಕಾರ್ಯಾಚರಣೆ ವೇಳೆ ಹೆಡ್ ಕಾನ್ಸ್ಟೇಬಲ್ ಯೋಗೇಶ್ ಅವರು ಸಾದಾ ಬಟ್ಟೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಗೆ ಹೋಗಿದ್ದಾರೆ. ಬ್ರೋಕರ್ ನೌಶದ್ ಮೂರನೇ ಮಹಡಿಯಲ್ಲಿದ್ದ ಮೂವರು ಮಹಿಳೆಯರನ್ನು ಕಾನ್ಸ್ಟೇಬಲ್ ಪರಿಚಯಿಸಿದರು.
ಆ ವೇಳೆ ಒಬ್ಬ ಮಹಿಳೆ 2000 ರೂ.ಗೆ ಬೇಡಿಕೆ ಇಟ್ಟಿದ್ದರು. ನಂತರ ಮಾತುಕತೆ ನಡೆಸಿ ಅದನ್ನು 1,500 ರೂ.ಗೆ ಇಳಿಸಲಾಯಿತು. ನಂತರ ಆ ಮಹಿಳೆಯೊಂದಿಗೆ ಕೊಠಡಿಗೆ ಹೋಗುತ್ತಿದ್ದಂತೆ ಕಾನ್ಸ್ಟೇಬಲ್ ಯೋಗೇಶ್ ತಾವು ಕೊಂಡೊಯ್ದಿದ್ದ ಕಲ್ಲುಗಳನ್ನು ಕಿಟಕಿ ಮೂಲಕ ಹೊರಗೆ ಎಸೆದು ತಮ್ಮೊಂದಿಗೆ ಬಂದಿದ್ದ ಇತರ ಪೊಲೀಸ್ ಸಿಬ್ಬಂದಿಗೆ ಒಳ ಬರಲು ಸೂಚನೆ ನೀಡಿದರು. ಸೂಚನೆ ಸಿಕ್ಕ ಬಳಿಕ ಒಳನುಗ್ಗಿದ ಪೊಲೀಸ್ ತಂಡ ಮೂರು ಮಹಿಳೆ ಹಾಗೂ ಪಿಂಪ್ ಅನ್ನು ಬಂಧಿಸಲಾಯಿತು.