ರುದ್ರಾಪುರ, ಉತ್ತರಾಖಂಡ್: ಉಧಮ್ ಸಿಂಗ್ ನಗರದ ರುದ್ರಾಪುರದ ಟ್ರಾನ್ಸಿಟ್ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯ ಆಜಾದ್ ನಗರದಲ್ಲಿ ವಿಷಾನಿಲ ಸೋರಿಕೆಯಿಂದಾಗಿ ಹಲವರು ಮೂರ್ಛೆ ಹೋಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಎಸ್‌ಡಿಆರ್‌ಎಫ್ ಮತ್ತು ಜಿಲ್ಲಾಡಳಿತದ ತಂಡ ಸ್ಥಳಕ್ಕೆ ತಲುಪಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.
ವಿಷಕಾರಿ ಅನಿಲ ಸೋರಿಕೆ.. ಎಸ್‌ಡಿಎಂ, ಎಸ್‌ಡಿಆರ್‌ಎಫ್ ಸಿಬ್ಬಂದಿ ಸೇರಿ 32ಕ್ಕೂ ಹೆಚ್ಚು ಜನ ಅಸ್ವಸ್ಥ - ವಿಷಾನಿಲ ಸೋರಿಕೆಯಿಂದಾಗಿ ಹಲವರು ಮೂರ್ಛೆ
ಉತ್ತರಾಖಂಡ್ನ ರುದ್ರಾಪುರದಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿ 32 ಮಂದಿ ಅಸ್ವಸ್ಥರಾಗಿರುವ ಘಟನೆ ಬೆಳಕಿಗೆ ಬಂದಿದೆ.
ವಿಷಕಾರಿ ಅನಿಲ ಸೋರಿಕೆ
ವಿಷಾನಿಲದ ಪರಿಣಾಮ 32 ಮಂದಿ ಮೂರ್ಛೆ ಹೋಗಿದ್ದಾರೆ. ಈ ಜನರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದಲ್ಲದೇ, ವಿಷಕಾರಿ ಅನಿಲದಿಂದಾಗಿ ಎಸ್‌ಡಿಎಂ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಮೇಲಿಯೂ ಪರಿಣಾಮ ಬೀರಿದ್ದಾರೆ. ಅಸ್ವಸ್ಥರಾದ ಕೆಲ ಸಿಬ್ಬಂದಿಯರನ್ನೂ ಸಹ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕ್ರ್ಯಾಪ್ ಅಂಗಡಿಯಲ್ಲಿ ಇರಿಸಲಾಗಿದ್ದ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಗ್ಯಾಸ್ ಸಿಲಿಂಡರ್ ಅನ್ನು ರಕ್ಷಣಾ ತಂಡವು ವಿಲೇವಾರಿ ಮಾಡಿದೆ.
ಓದಿ:ಒಳ ಚರಂಡಿ ದುರಸ್ತಿಗೆ ತೆರಳಿದ್ದ ಮೂವರು ವಿಷ ಅನಿಲ ಸೇವಿಸಿ ಸಾವು!