ಫರಿದಾಕೋಟ್ (ಪಂಜಾಬ್) :ದಟ್ಟ ಮಂಜು ಆವರಿಸಿದ್ದರಿಂದಾಗಿ ಪಂಜಾಬ್ನ ಫರಿದಾಕೋಟ್ನಲ್ಲಿ ಬರೋಬ್ಬರಿ 11 ವಾಹನಗಳ ಮಧ್ಯೆ ಅಪಘಾತ ಸಂಭವಿಸಿದ್ದು, ಅನೇಕರು ಗಾಯಗೊಂಡಿದ್ದಾರೆ.
ಬರೋಬ್ಬರಿ 11 ವಾಹನಗಳ ಮಧ್ಯೆ ಡಿಕ್ಕಿ, ಅನೇಕರಿಗೆ ಗಾಯ ರಾಷ್ಟ್ರೀಯ ಹೆದ್ದಾರಿ ಫರಿದಾಕೋಟ್ನ ಗ್ರಾಮವೊಂದರ ಬಳಿ ಈ ಅಪಘಾತ ಸಂಭವಿಸಿದೆ. ದಟ್ಟವಾದ ಮಂಜು ಆವರಿಸಿದ್ದ ಕಾರಣ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಪರಿಣಾಮ ಬಹುತೇಕ ಎಲ್ಲ ವಾಹನಗಳು ಜಖಂಗೊಂಡಿವೆ.
ಘಟನೆಯಲ್ಲಿ ಯಾವುದೇ ರೀತಿಯ ಸಾವು ಸಂಭವಿಸಿಲ್ಲವಾದ್ರೂ, ಅನೇಕರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಅವರನ್ನೆಲ್ಲ ಚಿಕಿತ್ಸೆಗೋಸ್ಕರ ಗುರು ಗೋಬಿಂದ್ ಸಿಂಗ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತಕ್ಕೊಳಗಾದ ವಾಹನಗಳಲ್ಲಿ ಬಸ್ ಕೂಡ ಇದೆ. ಇದರಲ್ಲಿದ್ದ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾಗಿ ವರದಿಯಾಗಿದೆ. ಇವರೆಲ್ಲರೂ ಫಿರೂಜ್ಪುರ್ನಿಂದ ಫರಿದಾಕೋಟ್ಗೆ ಪ್ರಯಾಣ ಬೆಳೆಸಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿರಿ:ಬೆಂಗಳೂರಲ್ಲಿ ಕಾಲೇಜಿನ 2ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ: ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಅಪಘಾತಕ್ಕೆ ವಾಹನವೊಂದರ ಟೈರ್ ಬಸ್ಟ್ ಆಗಿರುವುದು ಕಾರಣವಾಗಿದೆ. ಈ ವೇಳೆ ವಾಹನ ನಿಯಂತ್ರಣ ಕಳೆದುಕೊಂಡು ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಇತರ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ.
ಅಪಘಾತಕ್ಕೊಳಗಾದ ವಾಹನಗಳಲ್ಲಿ ಬಸ್ ಕೂಡ ಇದೆ. ಇದರಲ್ಲಿದ್ದ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾಗಿ ವರದಿಯಾಗಿದೆ. ಇವರೆಲ್ಲರೂ ಫಿರೂಜ್ಪುರ್ನಿಂದ ಫರಿದಾಕೋಟ್ಗೆ ಪ್ರಯಾಣ ಬೆಳೆಸಿದ್ದರು ಎಂದು ತಿಳಿದು ಬಂದಿದೆ.