ಕರ್ನಾಟಕ

karnataka

ETV Bharat / bharat

ಮದುವೆ ಸಮಾರಂಭದಲ್ಲಿ ಊಟ ಮಾಡಿದ ನಂತರ 200 ಮಂದಿ ಅಸ್ವಸ್ಥ.. ಆಸ್ಪತ್ರೆಗೆ ದಾಖಲು - Several fall ill after eating food

ಗುಜರಾತ್‌ನ ಪಾಲಿಟಾನಾದಲ್ಲಿ ಮದುವೆಯೊಂದರಲ್ಲಿ ರಾತ್ರಿ ಊಟ ಮಾಡಿದ ನಂತರ ಸುಮಾರು 200 ಮಂದಿ ಅಸ್ವಸ್ಥಗೊಂಡಿದ್ದಾರೆ. ಎಲ್ಲಾರನ್ನೂ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.

ವಿಷಾಹಾರ ಸೇವನೆ
ವಿಷಾಹಾರ ಸೇವನೆ

By

Published : Jan 2, 2023, 7:47 PM IST

ಪಾಲಿಟಾನ (ಗುಜರಾತ್): ಮದುವೆ ಸಮಾರಂಭವೊಂದರಲ್ಲಿ ಊಟ ಮಾಡಿದ ನಂತರ ಮಕ್ಕಳು ಸೇರಿದಂತೆ ಕನಿಷ್ಠ 200 ಜನರು ವಿಷಾಹಾರ ಸೇವನೆಯಿಂದ ಅಸ್ವಸ್ಥರಾಗಿದ್ದಾರೆ ಎನ್ನಲಾಗ್ತಿದೆ. ಈ ಘಟನೆ ಗುಜರಾತ್‌ನ ಪಾಲಿಟಾನಾದಲ್ಲಿ ನಡೆದಿದೆ. 200ರಲ್ಲಿ ಕನಿಷ್ಠ 150 ಮಂದಿಯನ್ನು ಪಾಲಿಟಾನಾದ ಮನ್‌ಸಿನ್‌ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾಲಿಟಾನಾದ ಘೆಟ್ಟಿ ರಿಂಗ್ ರೋಡ್ ನಿವಾಸಿ ಜಾಹಿದ್ ಭಾಯ್ ಮಕ್ವಾನಾ ಅವರ ಮನೆಯಲ್ಲಿ ವಿವಾಹ ನಡೆದಿತ್ತು. ಭೋಜನದ ಮೆನುವು ಬಿರಿಯಾನಿ, ಚಿಕನ್ ಕ್ರಿಸ್ಪ್ಸ್, ಸೇಬು ಪುಡಿಂಗ್ ಮತ್ತು ಇತರ ಅಡುಗೆಗಳನ್ನು ಮಾಡಿಸಲಾಗಿತ್ತು. ಒಟ್ಟು 1,300 ಮಂದಿ ಊಟಕ್ಕೆ ಬಂದಿದ್ದರು. ಮದುವೆಯಲ್ಲಿ ಊಟ ಮಾಡಿದ ನಂತರ ಹಲವಾರು ಜನರು ತಮ್ಮ ಆರೋಗ್ಯದ ಬಗ್ಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ವಿವಾಹ ಭೋಜನ ಸವಿದ 45 ಮಕ್ಕಳು ಸೇರಿ 100 ಮಂದಿ ಅಸ್ವಸ್ಥ

ಸುಮಾರು 100 ಜನರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ಇತರರು ಮಾನ್ಸಿನ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕೆಲವರನ್ನು ಖಾಸಗಿ ಆಸ್ಪತ್ರೆಗಳಿಗೆ ಮತ್ತಿಷ್ಟು ಜನರನ್ನು ಭಾವನಗರಕ್ಕೆ ರೆಫರ್ ಮಾಡಲಾಗಿದೆ. ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ಬಿಹಾರದ ಮಾಧೇಪುರ ಜಿಲ್ಲೆಯಲ್ಲಿ ಮದುವೆ ಸಮಾರಂಭವೊಂದರಲ್ಲಿ ಊಟ ಮಾಡಿದ ಬಳಿಕ ಕನಿಷ್ಠ 400 ಮಂದಿ ಅಸ್ವಸ್ಥರಾಗಿದ್ದರು. ನಂತರ, ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ.

ABOUT THE AUTHOR

...view details