ಕರ್ನಾಟಕ

karnataka

ETV Bharat / bharat

ಅಂಬೇಡ್ಕರ್ ಜಯಂತಿ​ ಮೆರವಣಿಗೆ ವೇಳೆ ವಿದ್ಯುತ್​ ತಗುಲಿ ಇಬ್ಬರು ಸಾವು - maharashtra crime

ಅಂಬೇಡ್ಕರ್​ ಜಯಂತಿ ಮೆರವಣಿಗೆ ವೇಳೆ ವಿದ್ಯುತ್​ ಸ್ಪರ್ಶಿಸಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ಯುವಕರು
ಮೃತ ಯುವಕರು

By

Published : Apr 14, 2023, 11:35 AM IST

Updated : Apr 14, 2023, 6:00 PM IST

ವಿರಾರ್​ (ಮಹಾರಾಷ್ಟ್ರ):ವಿರಾರ್‌ನ ಕಾರ್ಗಿಲ್ ನಗರದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್​ ಅವರ ಜನ್ಮ ದಿನಾಚರಣೆಯ ಪ್ರಯುಕ್ತದ ಮೆರವಣಿಗೆ ನಡೆಯುತ್ತಿದ್ದ ವೇಳೆ ವಿದ್ಯುತ್ ತಗುಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ 10:30ರ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ರೂಪೇಶ್ ಸುರ್ವೆ (30) ಮತ್ತು ಸುಮಿತ್ ಸುತ್ (23) ಎಂಬ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಮೇಶ್ ಕನೋಜಿಯಾ, ರಾಹುಲ್ ಜಗತಾಪ್, ಸತ್ಯನಾರಾಯಣ, ಅಸ್ಮಿತ್ ಕಾಂಬ್ಳೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಮುಂಬೈನ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಗಿಲ್ ನಗರದ ಬೌಧಜನ ಪಂಚಾಯತ್ ಸಮಿತಿ ವತಿಯಿಂದ ಡಾ. ಬಿ.ಆರ್​ ಅಂಬೇಡ್ಕರ್ ಅವರ ಜನ್ಮದಿನದ ನಿಮಿತ್ತ ಮೆರವಣಿಗೆ ಏರ್ಪಡಿಸಲಾಗಿತ್ತು. ರಾತ್ರಿ 9 ಗಂಟೆಗೆ ಮೆರವಣಿಗೆ ಆರಂಭವಾಗಿತ್ತು. 10.30 ಮುಕ್ತಾಯದ ವೇಳೆಗೆ ವೇಳೆಗೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಘಟನೆಯಲ್ಲಿ ಗಾಯಗೊಂಡಿರುವ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಭೀಮ್ ಸೈನಿಕರ ಸಂಘ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಂಘದ ಕಾರ್ಯಕರ್ತರು ಆಸ್ಪತ್ರೆಗೆ ಧಾವಿಸಿದ್ದಾರೆ.

ಘಟನಾ ಸ್ಥಳಕ್ಕೆ ಉಪ ಪೊಲೀಸ್ ಆಯುಕ್ತ ಸುಹಾಸ್ ಬಾವ್ಚೆ, ಸಹಾಯಕ ಪೊಲೀಸ್ ಆಯುಕ್ತ ರಾಮಚಂದ್ರ ದೇಶಮುಖ್​, ಹಿರಿಯ ಪೊಲೀಸ್ ನಿರೀಕ್ಷಕ ರಾಜೇಂದ್ರ ಕಾಂಬಳೆ, ಉಪ ತಹಸೀಲ್ದಾರ್ ಸಿ.ಕೆ.ಪವಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಗಿಲ್ ಚೌಕ್‌ನಿಂದ ಮೆರವಣಿಗೆ ಮುಗಿಸಿ ವಾಪಸ್​ ಆಗುವ ವೇಳೆ ಘಟನೆ ಸಂಭವಿಸಿದೆ. ಮೆರವಣಿಗೆ ನಂತರ ವಾಪಸ್​ ಆಗುತ್ತಿದ್ದ ಟ್ರಾಲಿ ವಾಹನದ ಮೇಲೆ 6 ಜನ ಯುವಕರು ನಿಂತಿದ್ದರು. ಇನ್ನು ಅದೇ ವಾಹನದಲ್ಲಿದ್ದ ಕಬ್ಬಿಣದ ರಾಡ್ ಹೈಟೆನ್ಷನ್​ ವಿದ್ಯುತ್​ ತಂತಿಗೆ ಸ್ಪರ್ಶಿಸಿದೆ. ಈ ವೇಳೆ ಆರು ಜನರಿಗೆ ವಿದ್ಯುತ್ ಪ್ರವಹಿಸಿ​ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವಿರಾರ್ ಪೊಲೀಸ್​ ಠಾಣೆಯ ಸಹಾಯಕ ಪೊಲೀಸ್ ಆಯುಕ್ತ ರಾಮಚಂದ್ರ ದೇಶಮುಖ್ ತಿಳಿಸಿದ್ದಾರೆ.

ಇದನ್ನೂ ಓದಿ:ಅಂಬೇಡ್ಕರ್ ಜನ್ಮದಿನ.. ಹೈದರಾಬಾದ್‌ನಲ್ಲಿ 'ಸಂವಿಧಾನ ಶಿಲ್ಪಿ'ಯ 125 ಅಡಿ ಎತ್ತರದ ಪ್ರತಿಮೆ ಅನಾವರಣ
ಇನ್ನೊಂದು ಕಡೆ ಹೈದರಾಬಾದ್‌ನಲ್ಲಿ ಬುಧವಾರ ರಾತ್ರಿ ವಿದ್ಯುತ್ ಸ್ಪರ್ಶದಿಂದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಈ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಖಾಸಗಿ ಉದ್ಯೋಗಿಯಾಗಿರುವ ಉಮೇರಾ ಫಾತಿಮಾ ಮತ್ತು ಮೊಹಮ್ಮದ್ ಮಹಮ್ಮದ್ ಅವರು ತಮ್ಮ ನಾಲ್ಕು ಮಕ್ಕಳೊಂದಿಗೆ ಹೈದರಾಬಾದ್‌ನ ಪ್ಯಾರಾಮೌಂಟ್ ಕಾಲೋನಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ನೀರಿನ ಮೋಟಾರ್ ಕೆಟ್ಟ ಪರಿಣಾಮ ಮನೆಗೆ ನೀರು ಬಂದಿಲ್ಲ. ನೀರು ಇಲ್ಲದ ಕಾರಣ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಮಹ್ಮದ್ ಅವರ ಮಕ್ಕಳಾದ ಮಹಮ್ಮದ್ ರಿಜ್ವಾನ್ (18) ಮತ್ತು ಮಹಮ್ಮದ್ ರಜಾಕ್ (16) ಬಕೆಟ್ ತೆಗೆದುಕೊಂಡು ಕೆಳಗಿಳಿದಿದ್ದರು.

ಮೋಟಾರ್ ಸ್ವಿಚ್ ಆನ್ ಆಗಿರುವುದನ್ನು ಗಮನಿಸದ ರಿಜ್ವಾನ್ ನೀರಿನ ಹೊಂಡಕ್ಕೆ ಇಳಿದಿದ್ದಾನೆ. ಬಕೆಟ್‌ನಲ್ಲಿ ನೀರು ಹಾಕಲು ಯತ್ನಿಸುತ್ತಿದ್ದಾಗ ವಿದ್ಯುತ್‌ ಸ್ಪರ್ಶಿಸಿ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಅಣ್ಣ ಹೊರಗೆ ಬಾರದೇ ಇದ್ದಾಗ ಕಿರಿಯ ಸಹೋದರ ರಜಾಕ್ ಒಳಗೆ ಹೋಗಿ ರಕ್ಷಿಸಲು ಯತ್ನಿಸಿದ್ದಾನೆ. ಆತನಿಗೂ ವಿದ್ಯುತ್ ತಗುಲಿ ಗುಂಡಿಗೆ ಬಿದ್ದಿದ್ದಾರೆ. ಸುದ್ದಿ ತಿಳಿದು ರಕ್ಷಿಸಲು ಯತ್ನಿಸಿದ ಸ್ಥಳೀಯರು ಮೂವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

ಇದನ್ನೂ ಓದಿ:ಅಂಬೇಡ್ಕರ್ ಜ್ಞಾನ ಮತ್ತು ಸಾಧನೆಯ ಪ್ರತೀಕ: ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್​, ಪ್ರಧಾನಿಯಿಂದಲೂ ನಮನ

Last Updated : Apr 14, 2023, 6:00 PM IST

ABOUT THE AUTHOR

...view details