ಕರ್ನಾಟಕ

karnataka

By

Published : Jun 13, 2022, 11:23 AM IST

ETV Bharat / bharat

ರಾಂಗ್​ ರೂಟ್​ನಲ್ಲಿ ಬಂದು ಇ - ರಿಕ್ಷಾಗೆ ಡಿಕ್ಕಿ ಹೊಡೆದ ಟ್ರಕ್​.. ಮೂವರು ಮಹಿಳೆಯರು ಸೇರಿ 6 ಜನರ ಸಾವು!

ಬಿಹಾರದ ಕೈಮೂರ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ನಾಲ್ವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

Road Accident in Kaimur  Hiva hit e rickshaw in Kaimur  6 killed in a horrific road accident in Kaimur  ಕೈಮೂರ್​ನಲ್ಲಿ ಭೀಕರ ರಸ್ತೆ ಅಪಘಾತ  ಬಿಹಾರದಲ್ಲಿ ಇ ರಿಕ್ಷಾಗೆ ಡಿಕ್ಕಿ ಹೊಡೆದ ಹಿವಾ ಟ್ರಕ್​ ಬಿಹಾರ ಅಪರಾಧ ಸುದ್ದಿ  ಬಿಹಾರ ಅಪಘಾತ ಸುದ್ದಿ
ರಾಂಗ್​ ರೂಟ್​ನಲ್ಲಿ ಬಂದು ಇ-ರಿಕ್ಷಾಗೆ ಡಿಕ್ಕಿ ಹೊಡೆದ ಟ್ರಕ್

ಕೈಮೂರ್ (ಬಿಹಾರ): ಹಿವಾ ಟ್ರಕ್​ ಮತ್ತು ಆಟೋ ಮಧ್ಯೆ ಡಿಕ್ಕಿ ಸಂಭವಿಸಿದೆ. ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಟೋದಲ್ಲಿ ಸವಾರಿ ಮಾಡುತ್ತಿದ್ದ 6 ಮಂದಿ ಸಾವನ್ನಪ್ಪಿದ್ದು, ನಾಲ್ಕಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮೃತರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ. ಈ ಅಪಘಾತ ಚೈನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಮವನ್ ಗ್ರಾಮದಲ್ಲಿ ಸಂಭವಿಸಿದೆ.

ಹೆದ್ದಾರಿಯಲ್ಲಿ ಟ್ರಕ್​ ರಾಂಗ್​ ರೂಟ್​ನಲ್ಲಿ ಹೋಗುತ್ತಿದ್ದು, ಎದುರಿಗೆ ಬರುತ್ತಿದ್ದ ಇ-ರಿಕ್ಷಾಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಸ್ಥಳದಲ್ಲೇ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಐವರು ಸಾವನ್ನಪ್ಪಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಶವಗಳನ್ನು ತಮ್ಮ ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಅಪಘಾತದಲ್ಲಿ ಗಾಯಗೊಂಡವನ್ನು ಪೊಲೀಸರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಿಕ್ಷಾ ಬಳಿಕ ಮುಂದೇ ಸಾಗಿದ ಟ್ರಕ್​ ರಸ್ತೆ ಪಕ್ಕಕ್ಕೆ ನಿಂತಿದ್ದ ಟೆಂಪೋಗೆ ಡಿಕ್ಕಿ ಹೊಡೆದು ನಿಂತಿದೆ. ಅದೃಷ್ಟವಶಾತ್ ಟೆಂಪೋ ಖಾಲಿಯಾಗಿತ್ತು.

ಓದಿ:ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ.. ಐವರ ಪ್ರಾಣ ತೆಗೆದ ಕಂಟೈನರ್​ ಚಾಲಕ

ಮಹಿಳೆಯರು ಸೇರಿದಂತೆ 6 ಸಾವು:ಮೃತರು ಸಿರ್ಬಿತ್ ಗ್ರಾಮದ ನಿವಾಸಿ ಜಗರೂಪ್ ಕುಶ್ವಾಹ ಅವರ ಪುತ್ರ ಶಿವಗಹನ್ ಕುಶ್ವಾಹ, ಅದೇ ಗ್ರಾಮದ ದಿವಂಗತ ರಾಮದಹಿನ್ ರಾಮ್ ಅವರ ಪುತ್ರ ದಿಲೀಪ್ ರಾಮ್, ಭೀಮಾ ರಾಮ್, ರುಖ್ಸಾನಾ ಖಾತೂನ್, ಶಾಂತಿದೇವಿ ಮತ್ತು ಭೇಕಾಸ್ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.

ರಾಂಗ್​ ರೂಟ್​ನಲ್ಲಿ ಬಂದು ಇ-ರಿಕ್ಷಾಗೆ ಡಿಕ್ಕಿ ಹೊಡೆದ ಟ್ರಕ್

ಭಬುವಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಅರ್ಜುನ್ ಪಾಸ್ವಾನ್ ಅವರ ಪತ್ನಿ ಮುರಾಹಿ ದೇವಿ ಸಹ ಸಾವನ್ನಪ್ಪಿದ್ದಾರೆ. ಗಾಯಗೊಂಡವರು ಸಿರ್ಬಿತ್ ಗ್ರಾಮದ ನಿವಾಸಿ ಸಾಹಿಲ್ ಆಲಂ ಮಂಜು ದೇವಿ, ಪೇಟ್ರಿಯನ್ ಗ್ರಾಮದ ದೇವಮುನಿ ಚೌಬೆ ಮತ್ತು ತಿಯೇರಿ ಗ್ರಾಮದ ರಾಹುಲ್ ಕುಮಾರ್ ಎಂದು ಗುರುತಿಸಲಾಗಿದೆ. ಮೃತ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಸ್ಥಳೀಯರ ಆಗ್ರಹಿಸಿದ್ದಾರೆ.

ಈ ಘಟನೆ ಕುರಿತು ಚೈನ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ABOUT THE AUTHOR

...view details