ಪಾಟ್ನಾ (ಬಿಹಾರ):ಬಿಹಾರದ ನಾನಾ ಜಿಲ್ಲೆಗಳಲ್ಲಿ ಸಿಡಿಲಿನ ಅಬ್ಬರಕ್ಕೆ 8 ಮಂದಿ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಬಹುತೇಕರು ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ.
ಬಂಕಾ ಜಿಲ್ಲೆಯ ಕಾಮತ್ಪುರ್ ಭಾಗದಲ್ಲಿ ಸಿಡಿಲಿಗೆ ಮಹಿಳೆಯೊಬ್ಬಳು ಬಲಿಯಾಗಿದ್ದಾಳೆ. ಮೃತಪಟ್ಟಾಕೆಯನ್ನು ಶಾಲು ದೇವಿ ಎಂದು ಗುರುತಿಸಲಾಗಿದೆ. ಜೊತೆಗೆ ಪುರನ್ಭಿಘ್ ಪ್ರದೇಶದಲ್ಲಿ ಓರ್ವ ಸಿಡಿಲಿಗೆ ಬಲಿಯಾಗಿ ಇನ್ನೋರ್ವ ಸುಟ್ಟ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೆಸ್ಟ್ ಚಾಂಪರನ್ ಜಿಲ್ಲೆಯ ಜೈತ್ಯ ಪ್ರದೇಶದಲ್ಲಿ ಇಬ್ಬರು ಸಹೋದರರಿಗೆ ಸಿಡಿಲು ಬಡಿದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟರೆ ಇನ್ನೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ಸ್ಥಿತಿ ಸಹ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿನ ಭಾಘಾ ನಗರ ಪ್ರದೇಶದ ದೇವಾಲಯ ಪೂಜಾರಿಯೊಬ್ಬರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಗಂಗು ಅಲಿಯಾಸ್ ಕೃಷ್ಣ ನಂದನ್ ಓಜಾ ಎಂದು ಗುರುತಿಸಲಾಗಿದೆ.
ಜಾಮೂಯ್ ಪ್ರದೇಶದ ಗುರ್ದಾಬಾದ್ನಲ್ಲಿ ಬಾಲಕಿಯೊಬ್ಬಳು ಸಿಡಿಲಿಗೆ ಬಲಿಯಾಗಿದ್ದಾಳೆ. ಇನ್ನೋರ್ವ ಬಾಲಕಿ ಗಾಯಗೊಂಡಿದ್ದಾಳೆ. ರಾಜ್ಯದ ಹಲವೆಡೆ ಇಂತಹ ಪ್ರಕರಣ ದಾಖಲಾಗಿವೆ.
ಓದಿ:Video: 12 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ಸಿಲುಕಿದ್ದ ನಾಲ್ವರನ್ನು ರಕ್ಷಿಸಿದ ITBP