ನವದೆಹಲಿ:ತೇಜಸ್ ಲಘು ಯುದ್ಧ ವಿಮಾನ (ಎಲ್‌ಸಿಎ)ವನ್ನು ಮಾರ್ಚ್ 2024 ರಂದು 48,000 ಕೋಟಿ ರೂ.ಗಳ ಒಪ್ಪಂದದಡಿ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಗುವುದು. ಒಟ್ಟು 83 ಜೆಟ್‌ಗಳ ಪೂರೈಕೆ ಪೂರ್ಣಗೊಳ್ಳುವವರೆಗೆ ವಾರ್ಷಿಕವಾಗಿ 16 ವಿಮಾನಗಳನ್ನು ನೀಡಲಾಗುವುದು ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ಭಾನುವಾರ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಮಾಧವನ್ ಅವರು, ಹಲವಾರು ದೇಶಗಳು ತೇಜಸ್ ವಿಮಾನವನ್ನು ಖರೀದಿಸಲು ತೀವ್ರ ಆಸಕ್ತಿ ತೋರಿಸಿವೆ. ಮುಂದಿನ ಎರಡು ವರ್ಷಗಳಲ್ಲಿ ಮೊದಲ ರಫ್ತು ಆದೇಶ ಬರುವ ಸಾಧ್ಯತೆಯಿದೆ ಎಂದಿದ್ದಾರೆ.
ಚೀನಾದ ಜೆಎಫ್ -17 ಯುದ್ಧ ವಿಮಾನಗಳಿಗೆ ಹೋಲಿಸಿದರೆ ತೇಜಸ್ ಮಾರ್ಕ್ 1 ಎ ಜೆಟ್ ಉತ್ತಮ ಕಾರ್ಯಕ್ಷಮತೆಯ ಮಟ್ಟವನ್ನು ಹೊಂದಿದೆ. ಏಕೆಂದರೆ ಇದು ಉತ್ತಮ ಇಂಜಿನ್, ರೇಡಾರ್ ಸಿಸ್ಟಮ್ ಮತ್ತು ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ನನ್ನು ಹೊಂದಿದೆ. ಅಲ್ಲದೇ ಉನ್ನತ ಮಟ್ಟದ ತಂತ್ರಜ್ಞಾನವನ್ನು ಹೊಂದಿದೆ.