ಮುಂಬೈ (ಮಹಾರಾಷ್ಟ್ರ): ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡು ಏಳು ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಮಹಾರಾಷ್ಟ್ರದ ಮುಂಬೈ ಸಮೀಪದ ವಸಾಯಿಯಲ್ಲಿ ನಡೆದಿದೆ. ಶಬ್ಬೀರ್ ಶಹನವಾಜ್ ಅನ್ಸಾರಿ ಎಂಬಾತನೇ ಮೃತ ಬಾಲಕ.
ಇಲ್ಲಿನ ರಾಮದಾಸ್ ನಗರದ ನಿವಾಸಿ ಶಹನವಾಜ್ ಅನ್ಸಾರಿ ಎಂಬುವರು ಸೆ.23ರಂದು ಬೆಳಗಿನಜಾವ 2.30ರ ಸುಮಾರಿಗೆ ತಮ್ಮ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿಯನ್ನು ಚಾರ್ಜ್ ಮಾಡಲು ಮನೆಯ ಹಾಲ್‌ನಲ್ಲಿ ಇಟ್ಟಿದ್ದರು. ಆದರೆ, ಬೆಳಗಿನ ಜಾವ 5:30ರ ಸುಮಾರಿಗೆ ಬ್ಯಾಟರಿ ಸ್ಫೋಟಗೊಂಡಿದೆ.