ಮುಂಬೈ:ಕೊರೊನಾ ಸಾಂಕ್ರಾಮಿಕ ರೋಗ ಎಲ್ಲೆಡೆ ತನ್ನ ಅಟ್ಟಹಾಸ ಮುಂದುವರೆಸುತ್ತಿದ್ದರೂ, ಇಲ್ಲೋರ್ವ ಏಳು ತಿಂಗಳ ಗರ್ಭಿಣಿ ಕಾನ್ಸ್ಟೇಬಲ್ 'ಡ್ಯೂಟಿ ಫಸ್ಟ್ ' ಎಂಬ ನಿಲುವಿಗೆ ಅಂಟಿಕೊಂಡು 12 ಗಂಟೆಗಳ ಕರ್ತವ್ಯದಲ್ಲಿದ್ದಾರೆ. ತಾಯ್ತನದ ಜವಾಬ್ದಾರಿಯ ಜೊತೆಗೆ ಬಿಸಿಲಿನ ಬೇಗೆ ಹಾಗೂ ಕೊರೊನಾ ಸೋಂಕನ್ನು ಎದುರಿಸುತ್ತಿದ್ದಾರೆ.
ಅವರು ಹೆಸರು ರೂಪಾಲಿ ಬಾಬಾಜಿ ಅಖಾಡೆ ಆಗಿದ್ದು, ಈಗಲೂ ಸುಮಾರು 12 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಘೋಷಿಸಿರುವ ಲಾಕ್ಡೌನ್ ಅನ್ನು ನಿಯಂತ್ರಿಸುವ ಕೆಲಸದಲ್ಲಿ ರೂಪಾಲಿ ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ರೈಲ್ವೆ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವ ರೂಪಾಲಿ, ಲಾಕ್ಡೌನ್ ವೇಳೆ ಬರುವ ವ್ಯಕ್ತಿಗಳ ದಾಖಲೆಗಳನ್ನು ಪರಿಶೀಲನೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಆ ದಾಖಲೆಗಳು ಸರಿಯಾಗಿದ್ದರೆ ಅವರಿಗೆ ಅನುಮತಿ ನೀಡುವುದು, ದಾಖಲೆಗಳು ಸರಿಯಾಗಿ ಇಲ್ಲದಿದ್ದರೆ ವಾಪಸ್ ಕಳುಹಿಸುವ ಅಥವಾ ದಂಡವಿಧಿಸುವ ಕೆಲಸವನ್ನು ಆಕೆ ಮಾಡುತ್ತಿದ್ದಾರೆ.