ಕರ್ನೂಲ್ (ಆಂಧ್ರಪ್ರದೇಶ):ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಅದೋನಿ ವಲಯದ ಅರೆಕಲ್ಲು ಗ್ರಾಮದಲ್ಲಿ ನಡೆದಿದೆ.
ಮನೆ ನಿರ್ಮಾಣಕ್ಕೆಂದು ತಂದು ಹಾಕಲಾಗಿದ್ದ ಕಲ್ಲಿನ ವಿಚಾರವಾಗಿ ಆರಂಭಗೊಂಡ ಗಲಾಟೆ ವಿಕೋಪಕ್ಕೆ ತಿರುಗಿ ಪರಸ್ಪರ ಹಲ್ಲೆ ನಡೆಸಿದ್ದಾರೆ. ಗ್ರಾಮದ ಲಕ್ಷ್ಮಣ ಎಂಬುವರು ಮನೆ ನಿರ್ಮಿಸುತ್ತಿದ್ದು, ಹೀಗಾಗಿ ಮುಂದಿನ ತಿಮ್ಮಾರೆಡ್ಡಿ ಮನೆ ಬಳಿ ಮನೆಗೆ ಬೇಕಾದ ಕಲ್ಲುಗಳ ತಂದು ಹಾಕಿದ್ದರು.
ಕುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಬಡಿದಾಡಿಕೊಂಡ 2 ಗುಂಪು..7 ಮಂದಿಗೆ ಗಂಭೀರ ಗಾಯ ಈ ವಿಚಾರವಾಗಿ ಇಂದು ಮಾತಿನ ಚಕಮಕಿ ನಡೆದಿದ್ದು, ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ, ಎರಡೂ ಕಡೆಯವರು ದೊಣ್ಣೆಗಳ ಎತ್ತಿಕೊಂಡು ಪರಸ್ಪರ ಹಲ್ಲೆಗೆ ಮುಂದಾಗಿದ್ದಾರೆ. ಘಟನೆಯಲ್ಲಿ 7 ಮಂದಿಗೆ ಗಂಭೀರವಾಗಿ ಗಾಯವಾಗಿದ್ದು, ಅದೋನಿ ಏರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಎರಡೂ ಕಡೆಯ ಒಟ್ಟು 10 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮೃತಪಟ್ಟ ಅವಿವಾಹಿತರಿಗೂ ಈ ಗ್ರಾಮದಲ್ಲಿ ಮಾಡ್ತಾರೆ ಅದ್ಧೂರಿ ಮದುವೆ!