ಬಲರಾಂಪುರ(ಛತ್ತೀಸ್‌ಗಢ):ಬಲರಾಂಪುರದ ಸಮ್ರಿ ಪೊಲೀಸ್ ಠಾಣೆಯ ಚುಂಚುನಾ ಮತ್ತು ಪುಂಡಗ್ ಪ್ರದೇಶಗಳಲ್ಲಿ ಸಿಆರ್‌ಪಿಎಫ್ ತಂಡವು 7 ಐಇಡಿ ಟಿಫಿನ್ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದು, ಮತ್ತಷ್ಟು ಶೋಧಕಾರ್ಯಾಚರಣೆ ನಡೆಯುತ್ತಿದೆ.
ಭುತಾಹಿ ಮಾಡ್ ರಸ್ತೆಯಲ್ಲಿ ಒಂದು ಕಿಲೋಮೀಟರ್ ದೂರದಲ್ಲಿ ನಕ್ಸಲರು ಐಇಡಿಗಳನ್ನು ಅಳವಡಿಸಿದ್ದಾರೆ ಎಂಬ ಮಾಹಿತಿ ಸಿಆರ್‌ಪಿಎಫ್ ತಂಡಕ್ಕೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಮೊದಲಿಗೆ ಮೂರು ಐಇಡಿಗಳು ಮತ್ತು ನಂತರ ನಾಲ್ಕು ಐಇಡಿಗಳು ದೊರೆತಿದೆ.
ಐಇಡಿಯನ್ನು ರಸ್ತೆಯಲ್ಲಿ ಹೂತುಹಾಕಿದ್ದು, ತಂತಿಗಳು ಮೇಲೆ ಗೋಚರಿಸುವಂತಿದ್ದವು. ಆ ತಂತಿಗಳ ಸಹಾಯದಿಂದ ಐಇಡಿಯನ್ನು ಜಪ್ತಿ ಮಾಡಲು ಸಿಆರ್‌ಪಿಎಫ್ ಯಶಸ್ವಿಯಾಯಿತು. ಎಲ್ಲಾ ಏಳು ಐಇಡಿಗಳು ಏಕಕಾಲದಲ್ಲಿ ಸ್ಫೋಟಗೊಳಿಸಲು ನಕ್ಸಲರು ಸಂಚು ರೂಪಿಸಿದ್ದರು.