ಕರ್ನಾಟಕ

karnataka

ETV Bharat / bharat

JEE Mains: ಪರೀಕ್ಷೆಯಲ್ಲಿ ಅಕ್ರಮ ಆರೋಪ, ಸಿಬಿಐನಿಂದ 7 ಮಂದಿ ಬಂಧನ - ಖಾಸಗಿ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ದಾಳಿ

ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆಸುತ್ತಿದ್ದ ಗಂಭೀರ ಆರೋಪದಲ್ಲಿ ಸಿಬಿಐ ಏಳು ಮಂದಿಯನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆಸಿದೆ.

Seven accused arrested in a case related alleged irregularities in jee mains exam
JEE Mains: ಪರೀಕ್ಷೆಯಲ್ಲಿ ಅಕ್ರಮ ಆರೋಪ.. ಸಿಬಿಐನಿಂದ 7 ಮಂದಿ ಬಂಧನ

By

Published : Sep 3, 2021, 7:14 PM IST

ನವದೆಹಲಿ:ಈಗ ನಡೆಯುತ್ತಿರುವ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅಕ್ರಮಗಳನ್ನು ನಡೆಸುತ್ತಿದ್ದ ಆರೋಪದಲ್ಲಿ ಸಿಬಿಐ ಗುರುವಾರ ರಾಷ್ಟ್ರದ ಹಲವೆಡೆ ದಾಳಿ ನಡೆಸಿ, ಹಲವಾರು ಆರೋಪಿಗಳನ್ನು ಬಂಧಿಸಿದೆ.

ಖಾಸಗಿ ಶಿಕ್ಷಣ ಸಂಸ್ಥೆ, ಆ ಸಂಸ್ಥೆಯ ನಿರ್ದೇಶಕರು, ಅಧಿಕಾರಿಗಳು ಮತ್ತು ಅಪರಿಚಿತ ವ್ಯಕ್ತಿ ಅಕ್ರಮದಲ್ಲಿ ಭಾಗಿಯಾದ ಆರೋಪದಲ್ಲಿ ಗುರುವಾರ ದೇಶದ 20 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಶುಕ್ರವಾರವೂ ದಾಳಿ ಮುಂದುವರೆಸಿದ ಸಿಬಿಐ ಸುಮಾರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ.

ABOUT THE AUTHOR

...view details