ಕರ್ನಾಟಕ

karnataka

By

Published : Nov 2, 2022, 5:44 PM IST

ETV Bharat / bharat

ಸಂಜಯ್ ರಾವುತ್ ನ್ಯಾಯಾಂಗ ಬಂಧನ ನವೆಂಬರ್ 9 ರವರೆಗೆ ವಿಸ್ತರಣೆ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಸದ ಸಂಜಯ್​ ರಾವುತ್​ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ನ್ಯಾಯಾಂಗ ಬಂಧನವನ್ನು ವಿಶೇಷ ಪಿಎಂಎಲ್​​ಎ ನ್ಯಾಯಾಲಯವು ನವೆಂಬರ್ 9 ರವರೆಗೆ ವಿಸ್ತರಿಸಿದೆ.

ಸಂಜಯ್ ರಾವುತ್
ಸಂಜಯ್ ರಾವುತ್

ಮುಂಬೈ:ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ಆದೇಶವನ್ನು ಇಲ್ಲಿನ ವಿಶೇಷ ಪಿಎಂಎಲ್​​ಎ ನ್ಯಾಯಾಲಯವು ಬುಧವಾರ ಕಾಯ್ದಿರಿಸಿದೆ. ನವೆಂಬರ್ 9 ರಂದು ಆದೇಶ ಪ್ರಕಟಿಸುವುದಾಗಿ ಹೇಳಿದೆ.

ರಾವತ್ ಅವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 9ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ನಿಯೋಜಿತವಾಗಿರುವ ವಿಶೇಷ ನ್ಯಾಯಾಧೀಶ ಎಂ ಜಿ ದೇಶಪಾಂಡೆ ಜಾಮೀನು ಅರ್ಜಿಯ ಆದೇಶವನ್ನು ನವೆಂಬರ್ 9 ರಂದು ಹೊರಡಿಸುವುದಾಗಿ ಹೇಳಿದರು.

ಇದನ್ನೂ ಓದಿ:'ಪತ್ರಾ ಚಾಲ್' ಭೂ ಹಗರಣ ಪ್ರಕರಣ: ಶಿವಸೇನಾ ಸಂಸದ ಸಂಜಯ್ ರಾವುತ್ ಬಂಧನ

ಉಪನಗರ ಗೋರೆಗಾಂವ್ ಪ್ರದೇಶದಲ್ಲಿನ ಪತ್ರಾ ಚಾಲ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಣಕಾಸು ಅಕ್ರಮಗಳಲ್ಲಿ ಅವರ ಪಾತ್ರವಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಈ ವರ್ಷದ ಜುಲೈನಲ್ಲಿ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವರನ್ನು ಬಂಧಿಸಿತ್ತು. ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ಸೆಂಟ್ರಲ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ಕಳೆದ ತಿಂಗಳು ಅವರು ಈ ಪ್ರಕರಣದಲ್ಲಿ ಜಾಮೀನು ಕೋರಿದ್ದರು, ಇದನ್ನು ಇಡಿ ವಿರೋಧಿಸಿತ್ತು.

ED ತನಿಖೆಯು ಪತ್ರಾ ಚಾಲ್‌ನ ಪುನರಾಭಿವೃದ್ಧಿಯಲ್ಲಿನ ಹಣಕಾಸಿನ ಅಕ್ರಮ ಮತ್ತು ಅವರ ಪತ್ನಿ ಹಾಗೂ ಸಹಚರರನ್ನು ಒಳಗೊಂಡಿರುವ ಸಂಬಂಧಿತ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದೆ.

ABOUT THE AUTHOR

...view details