ಕರ್ನಾಟಕ

karnataka

ETV Bharat / bharat

ಅಲಿಗಢ ಮುಸ್ಲಿಂ ವಿವಿಯ ಹಾಸ್ಟೆಲ್‌ನಲ್ಲಿ ಹುಳು ಮಿಶ್ರಿತ ಆಹಾರ ವಿತರಣೆ ಆರೋಪ: ವಿಸಿ ನಿವಾಸದ ಬಳಿ ವಿದ್ಯಾರ್ಥಿಗಳ ಗಲಾಟೆ... - Students protest against AMU administration

Students protest against AMU administration: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ (ಎಎಂಯು) ಹಾಸ್ಟೆಲ್‌ನಲ್ಲಿ ಹುಳು ಇರುವ ಆಹಾರ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಎಎಂಯು ಆಡಳಿತದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.

Students protest against AMU administration
ಅಲಿಗಢ ಮುಸ್ಲಿಂ ವಿವಿಯ ಹಾಸ್ಟೆಲ್‌ನಲ್ಲಿ ನೀಡುವ ಆಹಾರದಲ್ಲಿ ಹುಳು, ವಿಶ್ವವಿದ್ಯಾನಿಲಯದ ವಿಸಿ ನಿವಾಸದ ಬಳಿ ವಿದ್ಯಾರ್ಥಿಗಳ ಗಲಾಟೆ...

By ETV Bharat Karnataka Team

Published : Aug 26, 2023, 12:11 PM IST

ಅಲಿಗಢ (ಉತ್ತರ ಪ್ರದೇಶ):ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ (ಎಎಂಯು) ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಈ ಹಿಂದೆ ರೋಗಿಗಳ ಆಹಾರದಲ್ಲಿ ಹುಳುಗಳು ಕಾಣಿಸಿಕೊಂಡಿದ್ದವು ಎಂದು ಆರೋಪಿಸಲಾಗಿದೆ. ಈ ಕುರಿತು ಭಾರಿ ವಿವಾದ ಕೂಡಾ ಸೃಷ್ಟಿಯಾಗಿತ್ತು. ಮತ್ತೊಂದೆಡೆ, ಶುಕ್ರವಾರ ಎಎಂಯುನ ಹಾಸ್ಟೆಲ್ ಎಸ್.ಎಸ್. ನಾರ್ತ್ ಹಾಲ್​ನಲ್ಲಿ ವಿದ್ಯಾರ್ಥಿಗಳಿಗೆ ಹುಳು ಇರುವ ಆಹಾರ ಬಡಿಸಲಾಗಿದೆ. ಈ ವಿಚಾರವು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯಾರ್ಥಿಗಳು ತಡರಾತ್ರಿಯವರೆಗೂ ಉಪಕುಲಪತಿಗಳ ನಿವಾಸದ ಮುಂದೆ ಧರಣಿ ನಡೆಸಿದರು. ಎಎಂಯು ಆಡಳಿತವು ವಿದ್ಯಾರ್ಥಿಗಳ ಆರೋಗ್ಯದ ಜೊತೆಗೆ ಆಟವಾಡುತ್ತಿದೆ ಎಂದು ಕಿಡಿಕಾರಿದರು. ಹಾಸ್ಟೆಲ್​ನಲ್ಲಿ ಪದೇ ಪದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಹುಳುಗಳು ಹೆಚ್ಚಿರುವ ಆಹಾರವನ್ನು ಮತ್ತೆ ಮತ್ತೆ ನೀಡಲಾಗುತ್ತಿದೆ.

Students protest:ಶುಕ್ರವಾರ ರಾತ್ರಿ ಈ ವಿಷಯಕ್ಕೆ ಸಂಬಂಧಿಸಿದಂತೆ ಕೋಪಗೊಂಡ ನೂರಾರು ವಿದ್ಯಾರ್ಥಿಗಳು ಉಪಕುಲಪತಿಗಳ ನಿವಾಸದ ಹೊರಗೆ ಜಮಾಯಿಸಿದರು. ಹಾಸ್ಟೆಲ್‌ನಲ್ಲಿ ಬಡಿಸಿದ ರಸಗುಲ್ಲಾ ಮತ್ತು ಅನ್ನ ಒಳಗೊಂಡ ಆಹಾರದ ಸಮೇತ ವಿದ್ಯಾರ್ಥಿಗಳು ಧರಣಿ ನಡೆಸಿದರು. ಆ ಆಹಾರದಲ್ಲಿ ಹುಳುಗಳು ಓಡಾಡುತ್ತಿದ್ದವು. ಎಎಂಯು ಆಡಳಿತವು ಆಹಾರದ ಹೆಸರಿನಲ್ಲಿ ಪದೇ ಪದೆ ಕ್ರಿಮಿ ಕೀಟಗಳನ್ನು ಬಡಿಸುತ್ತಿದೆ ಎಂದು ವಿದ್ಯಾರ್ಥಿಗಳು ಗರಂ ಆದರು.

ವಿದ್ಯಾರ್ಥಿಗಳಿಗೆ ಹುಳುಗಳಿರುವ ಆಹಾರವನ್ನು ನೀಡಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಉಪಕುಲಪತಿಗಳಿಗೆ ಮನವಿ ಸಲ್ಲಿಸಿದ್ದು, ಜೊತೆಗೆ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆಹಾರದ ಗುಣಮಟ್ಟ ಸರಿಪಡಿಸುವ ಜೊತೆಗೆ ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ವಿದ್ಯಾರ್ಥಿ ರಶೀದ್ ಸಲೀಂ ಆಗ್ರಹಿಸಿದರು.

ರೋಗಿಗಳಿಗೆ ಹುಳು ಮಿಶ್ರಿತ ಆಹಾರ ನೀಡಿರುವ ವಿಚಾರ, ತನಿಖಾ ಸಮಿತಿ ರಚನೆಗೆ ನಿರ್ಧಾರ:ಅಲಿಗಢನಲ್ಲಿ, ಎಎಂಯುನ ಜೆ.ಎನ್. ಮೆಡಿಕಲ್‌ನಲ್ಲಿ ದಾಖಲಾದ ರೋಗಿಗಳಿಗೆ ಹುಳು ಮಿಶ್ರಿತ ಆಹಾರವನ್ನು ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಕುಲಪತಿಗಳ ಆದೇಶದ ಮೇರೆಗೆ ತನಿಖಾ ಸಮಿತಿಯನ್ನು ರಚಿಸಲಾಗುವುದು. ಇತ್ತೀಚಿನ ಮಧ್ಯಾಹ್ನದ ಊಟಕ್ಕೆ ನೀಡಿದ ಆಹಾರದಲ್ಲಿ ಹುಳುಗಳು ಕಾಣಿಸಿಕೊಂಡಿದ್ದರಿಂದ ರೋಗಿಗಳು ಅಸಮಾಧಾನ ಹೊರಹಾಕಿದರು.

ವೈದ್ಯಕೀಯ ಕಾಲೇಜು ಆಡಳಿತಕ್ಕೆ ಈ ಮಾಹಿತಿ ಬಂದ ತಕ್ಷಣ ಆಹಾರ ವಿತರಣೆ ನಿಲ್ಲಿಸಲಾಗಿತ್ತು. ಅದರಬದಲಿಗೆ ಬೇರೆ ಆಹಾರವನ್ನು ತಯಾರಿಸಲಾಯಿತು. ಸಾಮಾನ್ಯ ವಾರ್ಡ್‌ಗೆ ದಾಖಲಿಸಲಾಗಿರುವ ರೋಗಿಗಳಿಗೆ ಬೆಳಗಿನ ಉಪಾಹಾರ ಮತ್ತು ಎರಡೂ ಊಟವನ್ನು ಕಾಲೇಜು ಆಡಳಿತ ಮಂಡಳಿಯಿಂದ ನೀಡಲಾಗುತ್ತದೆ. ಈ ಲೋಪದ ಜವಾಬ್ದಾರಿಯನ್ನು ಸರಿಪಡಿಸಲಾಗುವುದು. ಈ ನಿಟ್ಟಿನಲ್ಲಿ ಉಪಕುಲಪತಿಗಳ ಆದೇಶದ ಮೇರೆಗೆ ತನಿಖಾ ಸಮಿತಿಯನ್ನು ರಚಿಸಲಾಗುವುದು ಎಂದು ವೈದ್ಯಕೀಯ ಅಧೀಕ್ಷಕ ಹಾರಿಸ್ ಎಂ. ಖಾನ್ ತಿಳಿಸಿದ್ದಾರೆ.

ಇದನ್ನೂ ಓದಿ:Madurai Train Fire Accident: ಮಧುರೈ ರೈಲಿನಲ್ಲಿ ಅಗ್ನಿ ಅವಘಡ: ಸಾವಿನ ಸಂಖ್ಯೆ 9ಕ್ಕೆ ಏರಿಕೆ...

ABOUT THE AUTHOR

...view details