ಕರ್ನಾಟಕ

karnataka

ETV Bharat / bharat

ಸೀರಮ್ ಇನ್‌ಸ್ಟಿಟ್ಯೂಟ್​ಗೆ ವಂಚನೆ ಪ್ರಕರಣ: 5 ರಾಜ್ಯಗಳ ಬ್ಯಾಂಕ್‌ಗಳಿಗೆ ಹಣ ವರ್ಗಾವಣೆ - ಸೀರಮ್ ಸಂಸ್ಥೆ

ಆದಾರ್ ಪೂನಾವಾಲಾ ಅವರ ಹೆಸರಿನಲ್ಲಿ ನಕಲಿ ವಾಟ್ಸ್​ಆ್ಯಪ್​ ಸಂದೇಶ ಕಳುಹಿಸಿ, ಸೀರಮ್ ಸಂಸ್ಥೆಗೆ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಲಾಗಿದೆ. ಇದೀಗ ಆ ಹಣ ಐದು ರಾಜ್ಯಗಳ ವಿವಿಧ ಬ್ಯಾಂಕ್​ಗಳಿಗೆ ವರ್ಗಾವಣೆಯಾಗಿದೆ.

Serum Institute Fraud Case
ಆದಾರ್ ಪೂನಾವಾಲಾ

By

Published : Sep 12, 2022, 4:41 PM IST

ಪುಣೆ (ಮಹಾರಾಷ್ಟ್ರ): ಸೀರಮ್ ಸಂಸ್ಥೆಗೆ ಆನ್​ಲೈನ್​ ಮೂಲಕ ಒಂದು ಕೋಟಿ ರೂಪಾಯಿ ಹಣ ವಂಚಿಸಲಾಗಿದೆ. ಅಲ್ಲದೇ ಆ ಹಣ ಐದು ರಾಜ್ಯಗಳ ವಿವಿಧ ಬ್ಯಾಂಕ್​ಗಳಿಗೆ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದೆ.

ಆದಾರ್ ಪೂನಾವಾಲಾ

ಸೀರಮ್ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಆದಾರ್ ಪೂನಾವಾಲಾ ಅವರ ಹೆಸರಿನಲ್ಲಿ ನಕಲಿ ವಾಟ್ಸ್​ಆ್ಯಪ್​ ಸಂದೇಶ ಕಳುಹಿಸಿ ಆನ್‌ಲೈನ್ ವಂಚನೆ ಮಾಡಲಾಗಿದೆ. ಈ ಕುರಿತು ಬಂಡಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೆಲ್ಲವೂ ಆನ್‌ಲೈನ್‌ನಲ್ಲಿ ಸೆಪ್ಟೆಂಬರ್ 7 ಮತ್ತು 8 ರ ನಡುವೆ ನಡೆದಿದೆ.

ಇದನ್ನೂ ಓದಿ: ಆದಾರ್ ಪೂನಾವಾಲಾ ಮೊಬೈಲ್ ಸಂಖ್ಯೆಯಿಂದ ನಕಲಿ ವಾಟ್ಸ್​ಆ್ಯಪ್​ ಸಂದೇಶ: ಸೀರಮ್​​ ಸಂಸ್ಥೆಗೆ 1 ಕೋಟಿ ವಂಚನೆ

ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಕೇರಳ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೆ ಹಣ ವರ್ಗಾವಣೆಯಾಗಿದೆ. ಐಸಿಸಿಐ, ಎಚ್​ಡಿಎಫ್​ಸಿ, ಎಸ್​ಬಿಐ, ಐಡಿಎಫ್​ಸಿ ಬ್ಯಾಂಕ್​​ಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ಬಂಡ ಗಾರ್ಡನ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್​​ಸ್ಪೆಕ್ಟರ್ ಪ್ರತಾಪ್ ಮಾನಕರ್ ತಿಳಿಸಿದ್ದಾರೆ.

ಏನಿದು ಘಟನೆ:ಆದಾರ್ ಪೂನಾವಾಲಾ ಸೀರಮ್ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸತೀಶ್ ದೇಶಪಾಂಡೆ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ದೇಶಪಾಂಡೆ ಅವರ ಮೊಬೈಲ್‌ಗೆ ಕಂಪನಿ ಸಿಇಒ ಪೂನಾವಾಲಾ ಅವರ ಮೊಬೈಲ್ ಸಂಖ್ಯೆಯಿಂದ ವಾಟ್ಸ್​ಆ್ಯಪ್​ ಸಂದೇಶ ಬಂದಿದೆ. ಆ ಸಂದೇಶದಲ್ಲಿ ಕೆಲವು ಬ್ಯಾಂಕ್ ಖಾತೆ ಸಂಖ್ಯೆಗಳನ್ನು ನೀಡಲಾಗಿತ್ತು. ಕೂಡಲೇ ಈ ನಂಬರ್‌ಗೆ ಹಣ ಕಳುಹಿಸುವಂತೆ ತಿಳಿಸಲಾಗಿತ್ತು.

ಅಂತೆಯೇ, ಕಂಪನಿಯ ಮಾಲೀಕರಾದ ಪೂನಾವಾಲಾ ಅವರಿಂದಲೇ ಈ ಸಂದೇಶ ಬಂದಿದೆ ಎಂದು ದೇಶಪಾಂಡೆ ತಿಳಿದುಕೊಂಡಿದ್ದಾರೆ. ಅಲ್ಲದೇ, ಈ ಬಗ್ಗೆ ಸಾಗರ ಕಿತ್ತೂರ ಎಂಬುವವರಿಗೆ ಮಾಹಿತಿ ನೀಡಿ ವಾಟ್ಸ್​ಆ್ಯಪ್​ ಸಂದೇಶದಲ್ಲಿದ್ದ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುವಂತೆ ಸೂಚಿಸಿದ್ದಾರೆ. ಆಗ ಸಾಗರ ಕಿತ್ತೂರು ಸಂದೇಶದಲ್ಲಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟಾರೆ 1,01,01,554 ರೂಪಾಯಿಗಳನ್ನು ಪಾವತಿಸಿದ್ದಾರೆ. ಇದೆಲ್ಲವೂ ಸೆಪ್ಟೆಂಬರ್ 7ರಿಂದ 8ರ ನಡುವೆ ಆನ್‌ಲೈನ್‌ನಲ್ಲಿ ನಡೆದಿದೆ.

ಇದಾದ ನಂತರ ಸಾಗರ ಕಿತ್ತೂರ ಅವರು ಹಣ ತುಂಬಿರುವ ಕಂಪನಿಯಲ್ಲಿ ಚರ್ಚಿಸಿದ್ದಾರೆ. ಈ ವೇಳೆ, ಆದಾರ್ ಪುನಾವಾಲಾ ಅವರು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸಲು ಯಾವುದೇ ಸಂದೇಶ ಕಳುಹಿಸಿಲ್ಲ ಎಂದು ತಿಳಿದುಬಂದಿದೆ. ಆದ್ದರಿಂದ ಆನ್​ಲೈನ್​ ವಂಚನೆ ಬಗ್ಗೆ ದೂರು ನೀಡಲಾಗಿತ್ತು.

ABOUT THE AUTHOR

...view details