ಕರ್ನಾಟಕ

karnataka

ETV Bharat / bharat

ಮಂಜು ತಂದ ಗಂಡಾಂತರ: ಗಾಜಿಯಾಬಾದ್​ನಲ್ಲಿ 30 ಕ್ಕೂ ಹೆಚ್ಚು ವಾಹನಗಳ ಸರಣಿ ಅಪಘಾತ - Series road accident in Ghaziabad news

ಮಂಜು ಕವಿದ ವಾತಾವರಣದಿಂದಾಗಿ ರಸ್ತೆ ಕಾಣದೆ ಹಾಗೂ ನಿಯಂತ್ರಣ ತಪ್ಪಿ 30 ಕ್ಕೂ ಹೆಚ್ಚು ವಾಹನಗಳು ಡಿಕ್ಕಿ ಹೊಡೆದುಕೊಂಡಿವೆ. ಓರ್ವ ವ್ಯಕ್ತಿ ಮೃತ ಪಟ್ಟಿದ್ದು, 10 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

Series road accident in Ghaziabad
ಗಾಜಿಯಾಬಾದ್​ನಲ್ಲಿ 30 ಕ್ಕೂ ಹೆಚ್ಚು ವಾಹನಗಳ ನಡುವೆ ಡಿಕ್ಕಿ

By

Published : Jan 16, 2021, 2:47 PM IST

ಗಾಜಿಯಾಬಾದ್‌: ಇಲ್ಲಿನ ಮುರಾದ್‌ನಗರ ಪ್ರದೇಶದಲ್ಲಿ, ಪೂರ್ವ ಪೆರಿಫೆರಲ್ ಎಕ್ಸ್‌ಪ್ರೆಸ್‌ ವೇನಲ್ಲಿ ಸರಣಿ ಅಪಘಾತ ಸಂಭವಿಸಿದೆ. ಓರ್ವ ವ್ಯಕ್ತಿ ಮೃತ ಪಟ್ಟಿದ್ದು, 10 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಂಜಿನಿಂದಾಗಿ 30 ಕ್ಕೂ ಹೆಚ್ಚು ವಾಹನಗಳು ಡಿಕ್ಕಿ ಹೊಡೆದುಕೊಂಡಿವೆ. ಗಾಯಗೊಂಡ ಎಲ್ಲರನ್ನೂ ಹತ್ತಿರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬಸ್​ಗಳು, ಕಾರುಗಳು, ಟ್ರಾಕ್ಟರ್​ಗಳು ಮತ್ತು ಟ್ರಕ್‌ಗಳು ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ 2 ವಾಹನಗಳು ಸಂಪೂರ್ಣ ಜಖಂ ಗೊಂಡಿವೆ.

ಇಂದು ಬೆಳಗ್ಗೆ ಎನ್‌ಸಿಆರ್ ರಸ್ತೆಗಳಲ್ಲಿ ದಟ್ಟವಾದ ಮಂಜು ಇತ್ತು. ಹೆದ್ದಾರಿಯಲ್ಲಿ ಮಂಜಿನ ಮಧ್ಯೆ ವೇಗವನ್ನು ನಿಯಂತ್ರಿಸಲು ಸಾಧ್ಯವಾಗದಿರುವುದು ಇಂತಹ ಭೀಕರ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ABOUT THE AUTHOR

...view details