ಬಿಹಾರ: ಇಡೀ ದೇಶವೇ ಕೋವಿಡ್ನಿಂದ ತತ್ತರಿಸಿರುವಾಗ ಬಿಹಾರದ ಕ್ಯಾನ್ಸರ್ ಪೀಡಿತ ವ್ಯಕ್ತಿಯೊಬ್ಬರು ಡೆಡ್ಲಿ ಸೋಂಕಿನ ವಿರುದ್ಧ ಹೋರಾಡಿ ಗೆದ್ದಿದ್ದಾರೆ.
ಪಾಟ್ನಾ ನಿವಾಸಿ 77 ವರ್ಷದ ನಿವೃತ್ತ ಪ್ರಾಧ್ಯಾಪಕ ದೇವಿ ಪ್ರಸಾದ್ ಕ್ಯಾನ್ಸರ್ ರೋಗಿಯಾಗಿದ್ದು, ಈ ನಡುವೆ ಮಾರಣಾಂತಿಕ ಕೋವಿಡ್ ಸೋಂಕಿಗೂ ತುತ್ತಾಗಿದ್ದರು. ಹೀಗಾಗಿ, ಚಿಕಿತ್ಸೆಗೆಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ, ಸೋಂಕಿನ ವಿರುದ್ಧದ ಹೋರಾಟದಲ್ಲಿ ದೇವಿ ಪ್ರಸಾದ್ ಗೆದ್ದಿದ್ದಾರೆ.