ಕರ್ನಾಟಕ

karnataka

ETV Bharat / bharat

ಗಡಿರೇಖೆಗಳಿಂದ ಬೇರ್ಪಟ್ಟ ಕುಟುಂಬವು ತಂತ್ರಜ್ಞಾನದ ಸಹಾಯದಿಂದ ಒಂದಾಗಿದ್ದು ಹೇಗೆ..?

ಸುಮಾರು ಎಂಭತ್ತು ವರ್ಷಗಳಿಂದ, ಮಾಯಾ ತನ್ನ ಸಹೋದರಿಯನ್ನು ಹುಡುಕುತ್ತಿದ್ದರು. ಅವರ ಮಗ ಸುವೇಂದು ಚಕ್ರವರ್ತಿ ಮತ್ತು ಹ್ಯಾಮ್ ರೇಡಿಯೋ ಸಹಾಯದಿಂದ ಮಾತ್ರ ತಾಯಿಯ ಸಹೋದರಿ ಬಾಂಗ್ಲಾದೇಶದಲ್ಲಿ ಇರುವುದನ್ನು ತಿಳಿಯಲು ಸಾಧ್ಯವಾಯಿತು.

Ham radio
ಗಡಿರೇಖೆಗಳಿಂದ ಬೇರ್ಪಟ್ಟ ಕುಟುಂಬವು ತಂತ್ರಜ್ಞಾನದ ಸಹಾಯದಿಂದ ಒಂದಾಗಿದ್ದು ಹೇಗೆ..?

By

Published : Mar 7, 2023, 8:28 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಜಗತ್ತಿನಲ್ಲಿ ರಾಜಕೀಯ ಮತ್ತು ಭೌಗೋಳಿಕ ಗಡಿಗಳಿಂದ ವಿಭಜನೆಯಾಗಿದ ಘಟನೆಗಳೇ ಹೆಚ್ಚು ನಡೆದಿವೆ. ಆದರೆ ವೃದ್ಧೆಯೊಬ್ಬರ ಒಡೆದು ಹೋಗಿದ್ದ ಕುಟುಂಬವೊಂದು ತಂತ್ರಜ್ಞಾನದ ಸಹಾಯದಿಂದ ಮತ್ತೆ ಒಂದುಗೂಡಿರುವಂತ ಹೃದಯಸ್ಪರ್ಷಿ ಅಪರೂಪದ ಸ್ಟೋರಿ ಇದು. ಹೌದು, ಚಿಕ್ಕ ವಯಸ್ಸಿನಲ್ಲಿ ಸಹೋದರಿಯಿಂದ ಬೇರ್ಪಟ್ಟು ತುಂಬಾ ಯಾತನೆ ಅನುಭವಿಸಿದ್ದ ವೃದ್ಧೆ ಮಾಯಾ ಚಕ್ರವರ್ತಿ, ಕಳೆದು ಹೋಗಿದ್ದ ಕುಟುಂಬದೊಂದಿಗೆ ಮತ್ತೆ ​ಸೇರುವ ಮೂಲಕ ಅವರಲ್ಲಿ ಪ್ರೀತಿ ಸೆಲೆಯೊಡೆದಿರುವ ಹೃದಯ ಮಿಡಿಯುವಂತಹ ಘಟನೆಯೊಂದು ಜರುಗಿದೆ.

ಸಹೋದರಿಯರನ್ನು ಬೇರ್ಪಡಿಸುತ್ತು ಆ ಪ್ರಯಾಣ: ಹೌದು, ಮಾಯಾಳ ಕಥೆಯು 1940ಕ್ಕಿಂತ ಹಿಂದಿನದು. ಅವರು ತನ್ನ ಸಹೋದರಿ ಬಿನಾಪಾನಿಯೊಂದಿಗೆ ಬಾಂಗ್ಲಾದೇಶದ ಶ್ಲೇಟ್‌ನಿಂದ ಕೋಲ್ಕತ್ತಾಕ್ಕೆ ಬಂದಿದ್ದರು. ಈ ಪ್ರಯಾಣವು ತನ್ನ ಸಹೋದರಿಯನ್ನು ಶಾಶ್ವತವಾಗಿ ಬೇರ್ಪಡಿಸುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ. ಏಕೆಂದರೆ, ಬಿನಾಪಾನಿಯ ಕುಟುಂಬವು ವಿಭಜನೆಯ ಸಮಯದಲ್ಲಿ ಬಾಂಗ್ಲಾದೇಶಕ್ಕೆ ಮರಳಲು ನಿರ್ಧರಿಸಿತ್ತು. ಆದರೆ ಮಾಯಾ ಅವರ ಕುಟುಂಬವು ಹೊಸದಾಗಿ ರಚಿಸಲಾದ ಪಶ್ಚಿಮ ಬಂಗಾಳದಲ್ಲಿ ನೆಲೆಸಬೇಕಾಯಿತು.

ಹ್ಯಾಮ್ ರೇಡಿಯೊ ಕಾರ್ಯಕ್ಕೆ ಲಭಿಸಿದ ಫಲ:ಸುಮಾರು ಎಂಬತ್ತು ವರ್ಷಗಳಿಂದ, ಮಾಯಾ ತನ್ನ ಸಹೋದರಿಯನ್ನು ಹುಡುಕುತ್ತಿದ್ದರು. ಅದಕ್ಕೆ ಸಾಥ್ ನೀಡಿದ್ದು ಅವರ ಮಗ ಸುವೇಂದು ಚಕ್ರವರ್ತಿ ಮತ್ತು ಹ್ಯಾಮ್ ರೇಡಿಯೊದ ಸಹಾಯದಿಂದ ಮಾತ್ರ ತಾಯಿ ಸಹೋದರಿ ಬಾಂಗ್ಲಾದೇಶದಲ್ಲಿ ಇರುವುದನ್ನು ತಿಳಿಯಲು ಸಾಧ್ಯವಾಯಿತು. ಪಶ್ಚಿಮ ಬಂಗಾಳ ಪೊಲೀಸ್‌ ಇಲಾಖೆಯ ಸೈಬರ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸುವೇಂದು ಅವರು ಬಾಂಗ್ಲಾದೇಶದ ಜನರನ್ನು ತಲುಪಲು ತಮ್ಮ ವೃತ್ತಿಪರ ಸಂಪರ್ಕಗಳನ್ನು ಬಳಸಿಕೊಂಡರು. ಆದರೆ, ಏನೂ ಕೆಲಸ ಮಾಡಲಿಲ್ಲ. ಅವರು ಬಾಂಗ್ಲಾದೇಶದ ಹ್ಯಾಮ್ ರೇಡಿಯೊದ ಸೊಹೆಲ್ ರಾಣಾ ಅವರೊಂದಿಗೆ ಸಂಪರ್ಕಕ್ಕೆ ಬಂದ ನಂತರ ಹಲವು ವಿಷಯಗಳು ತಿಳಿಯಲು ಪ್ರಾರಂಭವಾದವು.

ಸಹೋದರಿಯನ್ನು ಭೇಟಿಯಾಗುವುದು ಅವರ ಕೊನೆ ಆಸೆ:“ತಂಗಿಯನ್ನು ಭೇಟಿಯಾಗುವುದು ನನ್ನ ತಾಯಿಯ ಕೊನೆಯ ಆಸೆಯಾಗಿತ್ತು. ನಾನು ಬಹಳ ಸಮಯದಿಂದ ಪ್ರಯತ್ನಿಸುತ್ತಿದ್ದೆ. ನನ್ನ ವೃತ್ತಿಪರ ಸಂಪರ್ಕಗಳನ್ನು ಬಳಸಿಕೊಂಡು, ನಾನು ಬಾಂಗ್ಲಾದೇಶದ ಜನರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸಿದೆ. ಇದರಿಂದ ಅವರು ನನ್ನ ಚಿಕ್ಕಮ್ಮನನ್ನು ಹುಡುಕಲು ನಮಗೆ ಸಹಾಯ ಮಾಡಬಹುದು. ಆದರೆ, ಯಾವುದೇ ಕಾರ್ಯಗಳು ಫಲಿಸಲಿಲ್ಲ. ನಂತರ ನಾನು ಅಂತಿಮವಾಗಿ ಹ್ಯಾಮ್ ರೇಡಿಯೊದೊಂದಿಗೆ ಸಂಪರ್ಕಕ್ಕೆ ಬಂದೆ ಮತ್ತು ಅದು ಹಲವು ಅದ್ಭುತಗಳನ್ನು ಮಾಡಿದೆ. ನನ್ನ ಚಿಕ್ಕಮ್ಮನ ಕುಟುಂಬದೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ನನಗೆ ಸಾಧ್ಯವಾಯಿತು'' ಎಂದು ಪಶ್ಚಿಮ ಬಂಗಾಳ ಪೊಲೀಸರ ಸೈಬರ್ ವಿಭಾಗದಲ್ಲಿ ಕೆಲಸ ಮಾಡುವ ಮಾಯಾ ಅವರ ಮಗ ಸುವೇಂದು ಚರ್ಕವರ್ತಿ ಹೇಳಿದರು.

ನಮಗೆಲ್ಲರಿಗೂ ಇದು ತುಂಬಾ ಸಂತಸದ ಕ್ಷಣ:“ನಮ್ಮಲ್ಲಿ ಯಾವುದೇ ಚಿತ್ರ ಅಥವಾ ವಿಳಾಸ ಇರಲಿಲ್ಲದೇ ಇರುವುದರಿಂದ, ನಾನು ಅವರನ್ನು ಹುಡಿಕಿಸುವುದು ಸುಲಭದ ಕೆಲಸವಾಗಿರಲಿಲ್ಲ. ಬಾಂಗ್ಲಾದೇಶದ ಹ್ಯಾಮ್ ರೇಡಿಯೊದ ಸೊಹೆಲ್ ರಾಣಾ ನಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅಂತಿಮವಾಗಿ, ಕೆಲವು ದಿನಗಳ ಹಿಂದೆ, ನಾವು ಮಾಯಾ ಅವರ ಸಹೋದರಿ ಬಿನಾಪಾನಿ ಅವರ ಪುತ್ರ ರಣಜಿತ್ ಚಕ್ರವರ್ತಿ ಅವರನ್ನು ಸಂಪರ್ಕಿಸಲು ಸಾಧ್ಯವಾಯಿತು. ಇದು ನಮಗೆಲ್ಲರಿಗೂ ತುಂಬಾ ಸಂತೋಷದ ಕ್ಷಣವಾಗಿತ್ತು'' ಎಂದು ಹ್ಯಾಮ್ ರೇಡಿಯೊದ ಅಂಬರೀಷ್ ಚಕ್ರವರ್ತಿ ಈಟಿವಿ ಭಾರತ್​ಗೆ ತಿಳಿಸಿದರು.

ಮಾಯಾ ಅವರ ಸಹೋದರಿ ಬಿನಾಪಾನಿ 15 ವರ್ಷಗಳ ಹಿಂದೆ ನಿಧನರಾದರು. ಆದರೆ, ಉತ್ತರ ಕೋಲ್ಕತ್ತಾದ ಕಾಶಿಪುರದ ಚಕ್ರವರ್ತಿ ಕುಟುಂಬವು ಬಾಂಗ್ಲಾದೇಶದ ಹಬೀಪುರದ ಚಕ್ರವರ್ತಿಯೊಂದಿಗೆ ಸಂಪರ್ಕವನ್ನು ಸಾಧಿಸಲು ಯಶಸ್ವಿಯಾಗಿದೆ.

ವೀಡಿಯೊ ಕಾಲ್​ ಮಾಡಿ ಮಾತನಾಡಿದ್ದೇವೆ:“ನನ್ನ ಚಿಕ್ಕಮ್ಮನ ಸಾವಿನ ಬಗ್ಗೆ ತಿಳಿದ ನಂತರ ನನ್ನ ತಾಯಿ ಅಸಮಾಧಾನಗೊಂಡರು. ಆದರೆ, ಇದು ನಮಗೆ ದೊಡ್ಡ ಕ್ಷಣ ಎಂದು ನಾವು ಅವರಿಗೆ ತಿಳಿಸಲು ಪ್ರಯತ್ನ ಮಾಡಿದ್ದೆವು. ಇಂದು ಬೆಳಗ್ಗೆ ನಾನು ನನ್ನ ಸಹೋದರ ಮತ್ತು ಅವನ ಕುಟುಂಬದೊಂದಿಗೆ ವಿಡಿಯೋ ಕಾಲ್​ ಮಾಡಿ ಮಾತನಾಡಿದೆ. ಅವರೂ ಕೂಡಾ ಸಂಭ್ರಮಿಸಿದರು. ನನ್ನ ತಾಯಿಗೂ ತುಂಬಾ ಖುಷಿಯಾಗಿದೆ. ನನ್ನ ತಾಯಿಯ ಕೊನೆಯ ಆಸೆಯನ್ನು ಪೂರೈಸಲು ನನಗೆ ಇನ್ನಿಲ್ಲದ ಸಂತೋಷವಾಗಿದೆ'' ಎಂದು ಸುವೇಂದು ಹೇಳಿದರು.

ಮಾಯಾ ಅವರ ಕಥೆಯು ಪ್ರೀತಿ ಮತ್ತು ಕುಟುಂಬದ ಶಕ್ತಿಗೆ ಸಾಕ್ಷಿಯಾಗಿದೆ. ಅವರ ಜೀವನವು ಕಾಲ್ಪನಿಕ ಕಥೆಗಿಂತ ವಿಚಿತ್ರವಾಗಿದೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಾಯಾ ಚಕ್ರವರ್ತಿಯ ಕಥೆಯು ಅನಿಯಂತ್ರಿತ ಗಡಿ ರೇಖೆಗಳನ್ನು ಮೀರಿದ ಹೃದಯ ಮಿಡಿಯುವಂತೆ ಅಪರೂಪದ ವಿಶೇಷ ಘಟನೆಯಿದು.

ಇದನ್ನೂ ಓದಿ:2023ರಲ್ಲಿ ಆ್ಯಂಡ್ರಾಯ್ಡ್​ ಮತ್ತು ಗೂಗಲ್ ಪ್ಲೇ ಆಗಲಿವೆ ಮತ್ತಷ್ಟು ಸೇಫ್​!

ABOUT THE AUTHOR

...view details