ಮುಂಬೈ: ದೇಶದಲ್ಲಿ ಹೆಚ್ಚಾಗುತ್ತಿರುವ ಹಣದುಬ್ಬರ ನಿಯಂತ್ರಣಕ್ಕೆ ತರುವ ಉದ್ದೇಶದಿಂದ 2020ರ ಬಳಿಕ ಭಾರತೀಯ ರಿಜರ್ಸ್ ಬ್ಯಾಂಕ್ ರೆಪೊ ದರ ಏರಿಕೆ ಮಾಡಿ, ಅಚ್ಚರಿಯ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಮುಂಬೈ ಷೇರು ಸೂಚ್ಯಂಕದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ, ಸೂಚ್ಯಂಕದಲ್ಲಿ ದಾಖಲೆಯ 1307 ಅಂಕ ಇಳಿಕೆಯಾಗಿದೆ.
ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಸಹ 414 ರಷ್ಟು ಇಳಿಕೆ ಕಂಡಿದ್ದು, 16,677ರಲ್ಲಿ ವಹಿವಾಟು ಮುಗಿಸಿದೆ. ಇನ್ನೂ ಸೆನ್ಸೆಕ್ಸ್ 55,669ರಲ್ಲಿ ಮುಕ್ತಾಯವಾಗಿದೆ. ಸೂಚ್ಯಂಕದಲ್ಲಿ ದಾಖಲೆಯ ಇಳಿಕೆ ಕಂಡು ಬರುತ್ತಿದ್ದಂತೆ ಅನೇಕ ಕಂಪನಿಗಳ ಷೇರು ಮೌಲ್ಯ ಕುಸಿತಗೊಂಡಿದ್ದು, ದಿನಬಳಿಕೆ ವಸ್ತುಗಳ ತಯಾರಿಕಾ ಕಂಪನಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಉಳಿದಂತೆ ರಿಲಯನ್ಸ್ 3.14, ಹೆಚ್ಡಿಎಫ್ಸಿ 3.34, ಟೈಟನ್ 4.11, ಬಜಾಜ್ ಫೈನಾನ್ಸ್ 4.29, ಬಜಾಜ್ ಫಿನ್ಸರ್ವ್ 4.18 ನಷ್ಟು ಕುಸಿತ ಕಂಡಿವೆ. ಪವರ್ಗ್ರಿಡ್, ಎನ್ಟಿಪಿಸಿ, ಇನ್ಫೋಸಿಸ್, ವಿಪ್ರೋ, ಕೋಟಕ್ ಮಹೀಂದ್ರಾ ಬ್ಯಾಂಕ್ಗಳ ಷೇರುಗಳಲ್ಲಿ ಗಣನೀಯವಾದ ಏರಿಕೆ ಕಂಡು ಬಂದಿದೆ.