ಮುಂಬೈ: ಇಂದಿನ ವಹಿವಾಟಿನಲ್ಲಿ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಭಾರೀ ಏರಿಕೆ ಕಂಡಿವೆ.
1,030 ಅಂಕಗಳ ಹೆಚ್ಚಳದಿಂದ ಸೆನ್ಸೆಕ್ಸ್ 59,957.25 ಅಂಕ ತಲುಪಿದ್ದು, ರಾಷ್ಟ್ರೀಯ ಸಂವೇದನಾ ಸೂಚ್ಯಂಕ ನಿಫ್ಟಿ 176 ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 17,823 ಅಂಕ ತಲುಪಿದೆ.
ನಿರೀಕ್ಷೆಗಿಂತ ಮುಂಚೆಯೇ ಷೇರುಪೇಟೆ ವಹಿವಾಟಿನಲ್ಲಿ ದೊಡ್ಡಮಟ್ಟದ ಬದಲಾವಣೆ ಆಗಬಹುದು, ನಿರೀಕ್ಷೆಗಿಂತ ವೇಗವಾಗಿ ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂದು ಯುಸ್ ಫೆಡರಲ್ ರಿಸರ್ವ್ ಸಿಸ್ಟಮ್ ಭವಿಷ್ಯ ನುಡಿದಿತ್ತು. ಅದರಂತೆಯೇ ನಾಳಿನ ವಾರಾಂತ್ಯಕ್ಕೆ ಮುನ್ನವೇ ಭಾರೀ ಬದಲಾವಣೆಯಾಗಿದೆ. ಇದೇ ಮೊದಲ ಬಾರಿಗೆ ಬ್ಯಾಂಕಿಂಗ್, ಹಣಕಾಸು ಸೇವೆಗಳು ಹಾಗೂ ತೈಲ ಮತ್ತು ಅನಿಲ ಕಂಪನಿಗಳು ತನ್ನ ಷೇರುಗಳಲ್ಲಿ ಲಾಭ ಗಳಿಸಿವೆ.
ಇದನ್ನೂ ಓದಿ:ಹೊಸ ಆವಿಷ್ಕಾರದತ್ತ ಟೊಯೋಟಾ.. ವಿದ್ಯುತ್, ನೀರಿಗೆ ಕಂಪನಿಯ ಆವರಣದಲ್ಲೇ ಸೂಕ್ತ ವ್ಯವಸ್ಥೆ
ಬಜಾಜ್ ಫಿನ್‌ಸರ್ವ್, ಎಲ್ & ಟಿ, ಎಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ ಮತ್ತು ರಿಲಯನ್ಸ್ - ಅತಿ ಹೆಚ್ಚು ಲಾಭ ಕಂಡ ಕಂಪನಿಗಳಾಗಿವೆ.