ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ಸಕಾರಾತ್ಮಕ ಅಂಶಗಳ ಹಿನ್ನೆಲೆಯಲ್ಲಿ ಷೇರುಪೇಟೆ ಇಂದು ಆರಂಭಿಕ ಏರಿಕೆ ದಾಖಲಿಸಿದೆ.
ವಿದೇಶಿ ನಿಧಿಯ ಒಳಹರಿವಿನ ಹಿನ್ನೆಲೆಯಲ್ಲಿ ಮಾರುಕಟ್ಟೆ ಚೇತರಿಕೆ ಕಂಡಿದ್ದು, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಗಳಿಕೆ ಕಂಡಿವೆ. ಪ್ರಮುಖ 30 ಷೇರುಗಳ ಸೂಚ್ಯಂಕವು 436.79 ಪಾಯಿಂಟ್ ಏರಿಕೆ ಕಂಡು 50,238.41ಕ್ಕೆ ತಲುಪಿದೆ.
ಇನ್ನು, ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 131.55 ಪಾಯಿಂಟ್ ಹೆಚ್ಚಳ ಕಂಡು 14,852.85 ಕ್ಕೆ ತಲುಪಿದೆ. ಬಜಾಜ್ ಫೈನಾನ್ಸ್ ಶೇ 3 ರಷ್ಟು ಏರಿಕೆ ಕಂಡಿದ್ದು, ಒಎನ್‌ಜಿಸಿ, ಎಂ ಆಂಡ್ ಎಂ, ಮಾರುತಿ, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಎಚ್‌ಎಫ್‌ಸಿ ಅವಳಿಗಳು ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಸಕಾರಾತ್ಮಕ ಹಾದಿಯಲ್ಲಿ ಸಾಗುತ್ತಿವೆ.
ನಿನ್ನೆ ಸೆನ್ಸೆಕ್ಸ್ 562.34 ಪಾಯಿಂಟ್ ಹಾಗೂ ನಿಫ್ಟಿ 189.15 ಅಂಕಗಳ ಇಳಿಕೆ ಕಂಡು 14,721.30 ಕ್ಕೆ ಮುಕ್ತಾಯಗೊಂಡಿತ್ತು. ನ್ಯೂಯಾರ್ಕ್ ಸ್ಟಾಕ್ ಎಕ್ಸಚೇಂಜ್ ಹಾಗೂ ಏಷ್ಯಾದ ಶಾಂಘೈ, ಹಾಂಕಾಂಗ್, ಟೋಕಿಯೊ ಮತ್ತು ಸಿಯೋಲ್ ಮಾರುಕಟ್ಟೆಗಳು ಹಸಿರು ಮಾರ್ಕ್ನಲ್ಲಿ ಮುಂದುವರೆದಿವೆ.
ಓದಿ:ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ರಾಮ್ ಸ್ವರೂಪ್ ಅಂತ್ಯಕ್ರಿಯೆ