ಮುಂಬೈ: ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಬಹಿರಂಗಗೊಳ್ಳಲು ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ.
ಸೆನ್ಸೆಕ್ಸ್ ಸಾವಿರ ಅಂಕಗಳ ಏರಿಕೆ ಕಂಡು ಬಂದಿದ್ದು, ನಿಫ್ಟಿಯಲ್ಲೂ ಏರಿಕೆಯಾಗಿದೆ. ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲು ಆರಂಭಗೊಳ್ಳುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಈ ಏರಿಕೆ ಕಂಡು ಬಂದಿದೆ. ಇದರಿಂದ ಅನೇಕ ಹೂಡಿಕೆದಾರರು ದಿನದ ಆರಂಭದಲ್ಲೇ ಲಾಭ ಗಳಿಕೆ ಮಾಡಿದ್ದಾರೆ.