ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಮುಂಬೈ ಷೇರುಪೇಟೆ ಪಾತಾಳಕ್ಕೆ ಕುಸಿದಿದೆ. ಏಕಕಾಲಕ್ಕೆ ಸೆನ್ಸೆಕ್ಸ್ 2000ಕ್ಕೂ ಅಧಿಕ ಅಂಕ ಕುಸಿತ ಕಂಡರೆ, ನಿಫ್ಟಿ 581 ಅಂಕ ಕುಸಿದಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಮಿಲಿಟಿರಿ ಕಾರ್ಯಾಚರಣೆ ಘೋಷಿಸಿದ ಬಳಿಕ ಮುಂಬೈ ಷೇರುಪೇಟೆ 1428.34 ಅಂಕದಷ್ಟು ಕುಸಿತ ಕಂಡು ಹೂಡಿಕೆದಾರರು ಭಾರಿ ನಷ್ಟ ಅನುಭವಿಸುವಂತಾಗಿದೆ. ಇದೀಗ ಸೆನ್ಸೆಕ್ಸ್ 55,803.72 ಅಂಕದಷ್ಟಿದೆ. ಇದಲ್ಲದೇ, ನಿಫ್ಟಿ ಕೂಡ 413.35 ಅಂಕ ಇಳಿಕೆ ಕಂಡು 6,647.00 ವಹಿವಾಟು ನಡೆಸುತ್ತಿದೆ. ಷೇರುಪೇಟೆ ಇನ್ನಷ್ಟು ಕುಸಿತ ಕಾಣುವ ಸಾಧ್ಯತೆ ಇದೆ.