ಮುಂಬೈ(ಮಹಾರಾಷ್ಟ್ರ): ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಎರಡನೇ ದಿನವೂ ಕುಸಿತ ಕಂಡಿತು. ಇಂದಿನ ವ್ಯವಹಾರದ ಮುಕ್ತಾಯಕ್ಕೆ 388 ಅಂಕಗಳಷ್ಟು ಇಳಿಕೆ ಕಂಡು 58,576.37 ಅಂಕಗಳಿಗೆ ವ್ಯವಹಾರ ಮುಗಿಸಿತು. ಇದರ ಮುನ್ನಾ ದಿನ(ಸೋಮವಾರ) ಸೂಚ್ಯಂಕ 58,964 ಅಂಕಗಳನ್ನು ಹೊಂದಿತ್ತು.
ಇಂದು ಬೆಳಗ್ಗೆ ಸೆನ್ಸೆಕ್ಸ್ 58,743.50 ಅಂಕಗಳಲ್ಲಿ ವ್ಯವಹಾರ ಆರಂಭಿಸಿತ್ತು. ಮಧ್ಯದಲ್ಲೊಮ್ಮೆ 58,298.57 ಅಂಕಗಳಿಗೂ ಕುಸಿಯಿತು.ಇತ್ತ, ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಸಹ ನಷ್ಟದಲ್ಲೇ ದಿನದ ಮಾರುಕಟ್ಟೆ ಮುಗಿಸಿದೆ. ಒಟ್ಟಾರೆ ನಿಫ್ಟಿ 144.64 ಅಂಕಗಳನ್ನು ಕಳೆದುಕೊಂಡು 17,530.30 ವ್ಯವವಾರ ಮುಗಿಸಿದೆ. ಸೋಮವಾರ 109.40 ಅಂಕಗಳನ್ನು ಕಳೆದುಕೊಂಡಿತ್ತು.
ದೈತ್ಯ ಕಂಪನಿಗಳಿಗೆ ನಷ್ಟ: ಟಾಟಾ ಸ್ಟೀಲ್-ಶೇ.2.76, ಎಲ್ ಆ್ಯಂಡ್ ಟಿ ಕಂಪನಿ-ಶೇ.1.86, ಭಾರತಿ ಏರ್ಟೆಲ್-ಶೇ.2.15, ರಿಲಯನ್ಸ್ ಇಂಡಸ್ಟ್ರಿ-ಶೇ.1.90ರಷ್ಟು ಅಂಕಗಳನ್ನು ಕಳೆದುಕೊಂಡಿದೆ. ಐಟಿ ಕ್ಷೇತ್ರವೂ ನಷ್ಟ ಅನುಭವಿಸಿದೆ. ಟೆಕ್ ಮಹಿಂದ್ರಾ-ಶೇ.2.26, ವಿಪ್ರೋ-ಶೇ.2.16ರಷ್ಟು ಅಂಕಗಳು ನಷ್ಟವಾಗಿವೆ.
9 ಕಂಪನಿಗಳಿಗೆ ನೆಮ್ಮದಿ: ಬಿಎಸ್‌ಇ 30 ಕಂಪನಿಗಳ ಪೈಕಿ 9 ಕಂಪನಿಗಳು ಮಾತ್ರ ಲಾಭ ಕಂಡಿವೆ. ಆಕ್ಸಿಸ್ ಬ್ಯಾಂಕ್-ಶೇ.1.67, ಕೊಟಾಕ್ ಬ್ಯಾಂಕ್-ಶೇ.1.05ರಷ್ಟು ಅಂಕಗಳ ಜಿಗಿತ ಕಂಡಿವೆ. ಅಲ್ಲದೇ, ಪವರ್ ಗ್ರಿಡ್ ಕಾರ್ಪೊರೇಷನ್, ಮಾರುತಿ ಸುಜುಕಿ, ಐಸಿಐಸಿಐ ಬ್ಯಾಂಕ್ ಇಂಡಸ್ಇಂಡ್ ಬ್ಯಾಂಕ್ ಲಾಭ ಗಳಿಸಿವೆ.
ಇದನ್ನೂ ಓದಿ:100 ಉದ್ಯೋಗಿಗಳಿಗೆ ಕಾರು ಗಿಫ್ಟ್ ನೀಡಿದ ಚೆನ್ನೈ ಮೂಲದ ಐಟಿ ಕಂಪನಿ