ಮುಂಬೈ:ಇಂದು ಮುಂಬೈ ಷೇರು ಮಾರುಕಟ್ಟೆ ತಲ್ಲಣಿಸಿದೆ. ಸೂಚ್ಯಂಕದಲ್ಲಿ ದಾಖಲೆಯ 1,291.93 ಅಂಕ ಇಳಿಕೆ ಕಂಡುಬಂದಿದೆ. ಪ್ರಮುಖ ಕಂಪನಿಗಳ ಷೇರುಗಳ ಬೆಲೆ ನೆಲಕಚ್ಚಿತು. ಹೂಡಿಕೆದಾರರು ದಾಖಲೆಯ 3.39 ಲಕ್ಷ ಕೋಟಿ ಮೌಲ್ಯದ ಸಂಪತ್ತು ಕಳೆದುಕೊಂಡಿದ್ದಾರೆ.
ಇಂದು ವಹಿವಾಟು ಆರಂಭಗೊಳ್ಳುತ್ತಿದ್ದಂತೆ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಹಾಗು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿಯಲ್ಲಿ ಭಾರಿ ಇಳಿಕೆ ಕಂಡುಬಂತು. ಪರಿಣಾಮ, ಹೂಡಿಕೆದಾರರು ಕೈ ಸುಟ್ಟುಕೊಂಡರು. ಪ್ರಮುಖವಾಗಿ ಇನ್ಫೋಸಿಸ್, ಹೆಚ್ಡಿಎಫ್ಸಿ, ಟೆಕ್ ಮಹೀಂದ್ರಾ, ಹೆಚ್‌ಸಿಎಲ್ ಟೆಕ್, ವಿಪ್ರೋ ಷೇರುಗಳು ಹಿನ್ನೆಡೆ ಅನುಭವಿಸಿದವು.