ಮುಂಬೈ:ಕಳೆದ ನಾಲ್ಕೈದು ದಿನಗಳಿಂದ ಇಳಿಮುಖವಾಗಿದ್ದ ಮುಂಬೈ ಷೇರುಪೇಟೆ ಸೂಚ್ಯಂಕದಲ್ಲಿ ಇಂದು ಕೊಂಚ ಚೇತರಿಕೆ ಕಂಡುಬಂದಿದೆ. ಇಂದಿನ ಆರಂಭಿಕ ವಹಿವಾಟಿನಿಂದಲೂ ಏರಿಕೆ ಕಂಡುಬಂದಿದ್ದು, ಮಧ್ಯಾಹ್ನ ಒಂದು ಗಂಟೆ ವೇಳೆಗೆ 187 ಅಂಕಗಳಷ್ಟು ಏರಿಕೆ ಕಂಡು ವ್ಯವಹಾರ ಮುಂದುವರೆಸಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ 58,858.22 ಅಂಕಗಳೊಂದಿಗೆ ಆರಂಭಗೊಂಡು ನೀಫ್ಟಿ 59.85 ಅಂಕ ಹೆಚ್ಚಳದೊಂದಿಗೆ 17,563.20ಕ್ಕೆ ತಲುಪಿದೆ. ಇಂದಿನ ವಹಿವಾಟಿನಲ್ಲಿ ಭಾರ್ತಿ ಏರ್ಟೆಲ್, ಪವರ್ಗ್ರಿಡ್, ಸನ್ ಫಾರ್ಮಾ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ. 2.04ರಷ್ಟು ಏರಿಕೆ ಪಡೆದಿವೆ.