ಮುಂಬೈ: ವಿದೇಶಿ ನಿಧಿಯ ಒಳಹರಿವು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ಸಕಾರಾತ್ಮಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್‌ಗಳ ಲಾಭದ ಮೂಲಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 300 ಪಾಯಿಂಟ್‌ಗಳಿಗಿಂತ ಹೆಚ್ಚು ಏರಿಕೆ ಕಂಡಿದೆ.
30-ಷೇರು ಸೂಚ್ಯಂಕವು 315.89 ಪಾಯಿಂಟ್‌ಗಳು ಅಥವಾ 0.52 ಶೇಕಡಾ ಹೆಚ್ಚಿ 61,002.58 ಕ್ಕೆ ವಹಿವಾಟು ನಡೆಸುತ್ತಿದೆ. ಹಾಗೆ ಎನ್‌ಎಸ್‌ಇ ನಿಫ್ಟಿ 90.30 ಪಾಯಿಂಟ್‌ಗಳು ಅಥವಾ 0.50 ಶೇಕಡಾ ಏರಿಕೆಯಾಗಿ 18,193.05 ಕ್ಕೆ ತಲುಪಿದೆ.