ಕರ್ನಾಟಕ

karnataka

ETV Bharat / bharat

ಷೇರುಪೇಟೆಯಲ್ಲಿ ಗೂಳಿ ಓಟ: 61 ಸಾವಿರ ದಾಟಿ ಸಾರ್ವಕಾಲಿಕ ದಾಖಲೆ ಬರೆದ ಸೆನ್ಸೆಕ್ಸ್​

ಮುಂಬೈ ಷೇರು ಮಾರುಕಟ್ಟೆಯ ಈಕ್ವಿಟಿ ಬೆಂಚ್‌ಮಾರ್ಕ್​ನಲ್ಲಿ 511.37 ಪಾಯಿಂಟ್​ಗಳ ಏರಿಕೆಯೊಂದಿಗೆ ಸೆನ್ಸೆಕ್ಸ್​ 61,817.32 ಅಂಕ ತಲುಪಿದೆ. ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 130.20 ಅಂಕಗಳ ಏರಿಕೆಯೊಂದಿಗೆ 18,468.75 ಪಾಯಿಂಟ್​​ಗೆ ಹೆಚ್ಚಳವಾಗಿ ಸಾರ್ವಕಾಲಿಕ ದಾಖಲೆ ಬರೆಯಿತು.

ಷೇರುಪೇಟೆಯಲ್ಲಿ ಗೂಳಿ ಓಟ
ಷೇರುಪೇಟೆಯಲ್ಲಿ ಗೂಳಿ ಓಟ

By

Published : Oct 18, 2021, 10:08 AM IST

ಮುಂಬೈ: ಇಂದಿನ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ.

ಈಕ್ವಿಟಿ ಬೆಂಚ್‌ಮಾರ್ಕ್​ನಲ್ಲಿ 511.37 ಪಾಯಿಂಟ್​ಗಳ ಏರಿಕೆ ಕಂಡು ಸೆನ್ಸೆಕ್ಸ್​ 61,817.32 ಅಂಕ ತಲುಪಿದ್ದರೆ, ರಾಷ್ಟ್ರೀಯ ಸಂವೇದನಾ ಸೂಚ್ಯಂಕ ನಿಫ್ಟಿ 130.20 ಅಂಕಗಳ ಏರಿಕೆಯೊಂದಿಗೆ 18,468.75 ಅಂಕಗಳಿಗೆ ಹೆಚ್ಚಳವಾಗಿದೆ.

ಇದನ್ನೂ ಓದಿ:ರಾಜ್ಯದಲ್ಲಿ ತೆರಿಗೆ ಕಡಿತ ಮಾಡಿ, ಪೆಟ್ರೋಲ್ ದರ ಇಳಿಕೆ: ಸಿಎಂ ಭರವಸೆ

ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಐಟಿಸಿ ಲಿಮಿಟೆಟ್​​ ಟಾಪ್ ಗೇನರ್ ಆಗಿದ್ದು, ಶೇಕಡಾ 2.89 ರಷ್ಟು ಲಾಭ ಗಳಿಸಿದೆ. ಹೆಚ್​ಡಿಎಫ್​ಸಿ ಬ್ಯಾಂಕ್, ಟಾಟಾ ಸ್ಟೀಲ್ ತಲಾ ಶೇ.2 ರಷ್ಟು ಲಾಭ ಗಳಿಸಿದ್ದರೆ, ಇದರ ನಂತರ ಪವರ್​ ಗ್ರಿಡ್, ಐಸಿಐಸಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಎನ್‌ಟಿಪಿಸಿ ಲಾಭ ಕಂಡ ಕಂಪನಿಗಳಾಗಿವೆ.

ABOUT THE AUTHOR

...view details