ನವದೆಹಲಿ:ಕೊರೊನಾ ವೈರಸ್ (SARS-CoV-2) ರೂಪಾಂತರಗಳ ಪತ್ತೆಗಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದ್ದ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವೈರಾಣು ತಜ್ಞ ಶಾಹಿದ್ ಜಮೀಲ್ ರಾಜೀನಾಮೆ ನೀಡಿದ್ದಾರೆ.
2020ರ ಡಿಸೆಂಬರ್‌ನಲ್ಲಿ ಭಾರತದಲ್ಲಿ SARS-CoV-2 ನ ಬದಲಾವಣೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸಲು 10 ಪ್ರಯೋಗಾಲಯಗಳ ಜಾಲವಾಗಿ ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ಎಂಬ ಸಮಿತಿ ಸ್ಥಾಪಿಸಲಾಗಿತ್ತು. ಭಾರತದಲ್ಲಿ ಕಂಡುಬರುವ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ರೂಪಾಂತರಗಳ ವಂಶಾವಳಿಗಳನ್ನು ಈ ಪ್ರಯೋಗಾಲಯಗಳಲ್ಲಿ ಪತ್ತೆ ಹಚ್ಚಲಾಗುತ್ತಿತ್ತು. ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ 'ಡಬಲ್ ಮ್ಯುಟೆಂಟ್' ಕೊರೊನಾ ಕುರುಹುಗಳನ್ನು ಇದೇ ಸಮಿತಿ ನೀಡಿತ್ತು.